ದೇವನಹಳ್ಳಿ, ಅ. 15: ರೈಲ್ವೆ ಇಲಾಖೆ ವತಿಯಿಂದ ರೈಲ್ವೆ ಹಳಿ ಹೋಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂಡರ್‌ಪಾಸ್ ಕಾಮಗಾರಿಗಳನ್ನು ಮಾಡಿದ್ದಾರೆ. ಆದರೆ, ಮಳೆ ನೀರು ಹೋಗಲು ನಿರ್ಮಿಸಿರುವ ಸುರಂಗ ಮಾರ್ಗ ಕಳಪೆಯಿಂದ ಕೂಡಿದೆ. ಇದು ನಗರದ ಹೊರಹೊಲಯದ ಬಂಡೆ ಅಮಾನೀಕೆರೆಗೆ ಸಾಗುವ ರಸ್ತೆಯಲ್ಲಿ ಈ ಸಮಸ್ಯೆ ಜನರನ್ನು ಕಾಡುತ್ತಿದೆ.
ಕಳೆಪೆ ಕಾಮಗಾರಿ ಆಗಿರುವುದರಿಂದ ಕೂಡಲೇ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 7 ರ ಮತ್ತು ರೈಲು ಮಾರ್ಗದ ಮಧ್ಯೆ 40 ರಿಂದ 50 ಅಡಿ ಅಂತವಿದೆ. ಅಂಡರ್ ಪಾಸ್ ಕೆಳಭಾಗದಲ್ಲಿ ಸಂಗ್ರಹವಾಗಿರುವ ಮಳೆನೀರು ಸರಾಗವಾಗಿ ಹರಿಯಲು ಸೇತುವೆಯಿಂದ ಬೆಂಗಳೂರು ಕಡೆಗೆ ಸುಮಾರು ನೂರಕ್ಕೂ ಹೆಚ್ಚು ಅಡಿ ಸುರಂಗ ತೋಡಿ ಪೈಪ್ ಅಳವಡಿಸಿ, ಸಿಮೆಂಟ್, ಮರಳು ಜೆಲ್ಲಿಹಾಕಿ, ಪೈಪಿನ ಸುತ್ತ ಹಾಗೂ ಮೇಲ್ಭಾಗದಲ್ಲಿ ಭದ್ರ ಪಡಿಸಬೇಕಾಗಿತ್ತು.
ಅನೇಕ ಗ್ರಾಮಗಳ
ಕಡೆ ಅಂಡರ್‌ಪಾಸ್ ಕಾಮಗಾರಿ ಮುಗಿದು ಒಂದೂವರೆ ವರ್ಷವಷ್ಟೇ ಆಗಿದೆ. ಬುಳ್ಳಹಳ್ಳಿ ಗೇಟ್, ಯರ್ತಿಗಾನಹಳ್ಳಿ ಗೇಟ್, ಮೇಲಿನ ತೋಟ ಗೇಟ್, ಅತ್ತಿಬೆಲೆ ಗೇಟ್ ಹಾಗೂ ಇತರೆ ಕಡೆಗಳಲ್ಲಿ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಸಂಗ್ರಹವಾದರೇ ತಿಂಗಳಾದರೂ ಸಹ ಹೊರಹೋಗುವುದಿಲ್ಲ. ಮೋಟರ್ ಪೈಪ್‌ನಲ್ಲಿ ನೀರನ್ನು ಆಚೆಯಾಕುವ ಪ್ರಯತ್ನ ಮಾಡುತ್ತಾರೆ. ಸಣ್ಣ ಅಮಾನೀಕೆರೆಗೆ ಹೋಗುವ ಗ್ರಾಮಸ್ಥರಿಗೆ ಈ ರಸ್ತೆಯನ್ನು ಅವಲಂಬಿಸಿದ್ದು, ಮಳೆ ನೀರು ಹೆಚ್ಚು ನಿಲ್ಲುವುದರಿಂದ ಯಾವುದೇ ನೀರು ಹೋಗಲು ಅನುಕೂ
ಲ ಮಾಡಿರುವುದಿಲ್ಲ. ಪ್ರತಿ ಬಾರಿ ಮಳೆ ಬಂದರೆ ಸಮಸ್ಯೆ ಎದುರಿಸುವ ಸ್ಥಿತಿ ಸ್ಥಳೀಯರಿಗೆ ಬಂದೊದಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ.
ಕುಸಿದು ಬಿದ್ದಿರುವ ಸುರಂಗದ ಜಾಗದಿಂದ ಐದಾರು ಅಡಿ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 7 ರ ರಸ್ತೆ ಬೆಂಗಳೂರು-ಬಳ್ಳಾರಿ-ಹೈದರಾಬಾದ್ ಮಾರ್ಗ ಇರುವುದರಿಂದ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತದೆ. ಬಾರಿ ವಾಹನಗಳು ಸಂಚರಿಸುತ್ತಿರುವುದರಿಂದ ಹೆದ್ದಾರಿ ರಸ್ತೆ ಕಡೆಯಿಂದ ಕೆಲವು ಗಿಡಮರಗಳು ಬೆಳೆದಿರುವುದರಿಂದ ಮರಗಳ ಬೇರುಗಳ ಮಧ್ಯೆಯೂ
ಸುರಂಗದ ಗೋಡೆ ಮಣ್ಣು ಕುಸಿಯುತ್ತಿದೆ. ಮತ್ತೊಂದು ಕಡೆ ಸುರಂಗದ ಬಲಭಾಗದಲ್ಲಿ ರೈಲ್ವೆ ಮಾರ್ಗವಿದೆ. ಪ್ರತಿ ದಿನನಿತ್ಯ ನಾಲ್ಕು ಬಾರಿ ರೈಲು ಸಂಚರಿಸುತ್ತದೆ. ಸುರಂಗದ ಗೋಡೆಯಿಂದ ಕೇವಲ ಐದಾರು ಅಡಿ ಅಂತರದಲ್ಲಿ ರೈಲು ಮಾರ್ಗ ಇರುತ್ತದೆ. ರೈಲು ಸಂಚರಿಸುವಾಗ ಗೋಡೆಗಳು ಬೆಟ್ಟ ಉರುಳುವಂತೆ ಉರುಳಿದರೆ ಹೆಚ್ಚಿನ ಅನಾಹುತ ಆಗುವುದು ಖಚಿತ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಸಹ ಸಂಬಂಧಿಸಿದ ರೈಲ್ವೆ ಇಲಾಖೆ ಕುಂಭಕರ್ಣ ನಿದ್ದೆಯಲ್ಲಿ ಜಾರಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೇವಲ ಮಣ್ಣಿನ ಸುರಂಗ ನಿರ್ಮಾಣ ಮಾಡಲಾಗಿದೆ. ಇತ್ತಿಚೆಗೆ ಸುರಿದ ಮಳೆಯಿಂದಾಗಿ ಮಣ್ಣಿನ ಇಕ್ಕಲಗಳ ಗೋಡೆ ಕುಸಿಯುತ್ತಿದ್ದು, ಕೋಟ್ಯಾಂತರ ರೂಪಾಯಿಗಳ ಕಾಮಗಾರಿ ಕಳಪೆಯಿಂದ ಕೂಡಿದೆ. ಇದಕ್ಕೆ ಇಲಾಖೆ ಅಧಿಕಾರಿಗಳೇ ಪರೋಕ್ಷ ಬೆಂಬಲ ನೀಡಿದ್ದಾರೆ. ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸುವುದೇ ಅನುಮಾನ ಎನ್ನುತ್ತಾರೆ ಬಂಡೇ ಅಮಾನಿಕೆರೆ ನಿವಾಸಿಗಳು.
ಇಂತಹ ಕಳಪೆ ಕಾಮಗಾರಿಗಳನ್ನು ಮಾಡುವ ಬದಲು ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತಾಗಬೇಕು. ಗುತ್ತಿಗೆ ದಾರರಿಗೆ ಈಗಾಗಲೇ ಹಲವಾರು ಬಾರಿ ತಿಳಿಸಿದರೂ ಸಹ ಕಾಮಗಾರಿ ಬಿಲ್ ಮಂಜೂರಾತಿಗಾಗಿ ಕಳಪೆ ಕಾಮಗಾರಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿರುದ್ಧ ದಿಕ್ಕಿನಲ್ಲಿ ಸಾಗಿ ಗ್ರಾಮಕ್ಕೆ ಚಲಿಸುವ ಪರಿಸ್ಥಿತಿ ಇದೆ. ಇಲ್ಲವಾದರೆ 3 ಕಿ.ಮೀ. ಚಲಿಸಿ ಗ್ರಾಮ ತಲುಪಬೇಕು. ಅವೈಜ್ಞಾನಿಕ ಕಾಮಗಾರಿಯಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ.