ಮುಂಬೈ, ಅ. 15: ಭಾರತ ತಂಡದಲ್ಲಿ ತಮ್ಮದೆ ಆದ ಸ್ವಿಂಗ್ ನಿಂದ ಗಮನ ಸೆಳೆದಿದ್ದ ಮಾಜಿ ವೇಗಿ ಇರ್ಫಾನ್ ಪಠಾಣ್ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಲಿರುವ ತಮಿಳು ಚಿತ್ರದಲ್ಲಿ ಇರ್ಫಾನ್ ಪಠಾಣ್ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಟ ಚಿಯಾನ್ ವಿಕ್ರಮ್ ಎದುರು ಇರ್ಫಾನ್ ಪಠಾಣ್ ತೆರೆ ಹಂಚಲಿದ್ದಾರೆ.