ಮುಂಬೈ, ಅ.15 : ಯಾವುದಾದರೂ ಹಡಗು ಮುಳುಗುತ್ತಿದ್ದರೆ ಅದರ ನಾಯಕ ಜನರನ್ನು ಸುರಕ್ಷೆಯ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾನೇ ಮೊದಲು ಹೊರಗೆ ಓಡುವುದಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮುಳುಗುತ್ತಿದ್ದರೆ ಅದರ ನಾಯಕ ರಾಹುಲ್ ಗಾಂಧಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಎಂದು ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದ ಭೀವಂಢಿಯಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಭಾರತದಲ್ಲಿ ಮುಸ್ಲಿಮರು ಬದುಕಿರುವುದು ಕಾಂಗ್ರೆಸ್ ನ ಕರುಣೆಯಿಂದಲ್ಲ. ದೇವರ ಕೃಪೆ ಮತ್ತು ಸಂವಿಧಾನದಿಂದಾಗಿ ನಾವು ಜೀವಂತ ಉಳಿದಿದ್ದೇವೆ ಎಂದು ಓವೈಸಿ ಹೇಳಿದರು.