ಟೋಕಿಯೊ, ಅ. 15 : ಉದಯರವಿ ನಾಡು ಜಪಾನ್ ಮೇಲೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತದಿಂದ ಸತ್ತವರ ಸಂಖ್ಯೆ 74ಕ್ಕೇರಿದೆ. ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು. ಆತಂಕವೂ ಇದೆ. ಹಿಬಿಬಿಸ್ ಹೆಸರಿನ ಚಂಡಮಾರುತ ಎರಗಿ ಮೂರು ದಿನಗಳಾದರೂ ಜಪಾನ್ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ತೀವ್ರ ಅಡ್ಡಿಯಾಗಿದೆ. ಚಂಡಮಾರುತ, ಭಾರೀ ಮಳೆ, ವ್ಯಾಪಕ ಭೂಕುಸಿತಗಳಿಂದ ಜಪಾನ್ ರಾಜಧಾನಿ ಟೋಕಿಯೋ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಬಹುತೇಕ ಕಡೆ ಗಂಭೀರ ಸ್ವರೂಪದ ಹಾನಿಗಳಾಗಿ