ಬೆಂಗಳೂರು, ಅ. 14: ಕನ್ನಡದಲ್ಲಿ ಖ್ಯಾತಿ ಪಡೆದಿರುವ ಬಿಗ್‌ಬಾಸ್ ಕಾರ್ಯಕ್ರಮದ 7ನೇಯ ಸೀಸನ್ ನೆನ್ನ ತಾನೆ ಶುರುವಾಗಿದೆ. ಶುರುವಿನಲ್ಲಿಯೇ ಶೋನ ಸೆಂಟರ್ ಆಫ್ ಅಟ್ರಾಕ್ಷನ್ ರವಿ ಬೆಳಗೆರೆ ರನೌಟ್ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಪತ್ರಕರ್ತ ರವಿ ಬೆಳೆಗೆರೆ ಮನೆಯಿಂದ ಹೊರ ಬಂದಿದ್ದಾರೆ.
ಹೌದು, ರವಿ ಬೆಳಗೆರೆ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರಂತೆ. ರವಿ ಬೆಳಗೆರೆಗೆ ಅನಾರೋಗ್ಯ ಸಮಸ್ಯೆ ಕಾಡಿದೆ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಸದ್ಯ, ಅವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
ರವಿ ಬೆಳಗೆರೆ ಅವರಿಗೆ ಈ ಮೊದಲು ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಆಸ್ಪತ್ರೆಗೆ ಕೂಡ ದಾಖಲಾಗಿದ್ದರು. ಅವರ ದೇಹ ಬಿಗ್ ಬಾಸ್ ಮನೆಯಲ್ಲಿ ನೀಡುವ ಸ್ಪರ್ಧೆಗೆ ಸ್ಪಂದಿಸಲಿದೆಯೇ? ಅವರು ಟಾಸ್ಕ್ಗಳನ್ನು ಮಾಡಲಿದ್ದಾರಾ ಎನ್ನುವ ಪ್ರಶ್ನೆಗಳನ್ನು ಅನೇಕರು ಕೇಳಿಕೊಂಡಿದ್ದರು.
ಭಾನುವಾರದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆ ಒಳಗೆ ಎಲ್ಲ ಸ್ಪರ್ಧಿಗಳು ಮನೆ ಸೇರಿ ಆಗಿತ್ತು. ಈ ವೇಳೆ ಮೀಟಿಂಗ್ ಕೂಡ ಕರೆಯಲಾಗಿತ್ತು. ಆದರೆ, ರವಿ ಬೆಳಗೆರೆ ಮಾತ್ರ ಕಾಣುತ್ತಿರಲಿಲ್ಲ. ಇದು ಕೂಡ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈಗ ಅವರು ಮನೆಯಿಂದಲೇ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಇಂದು ಉತ್ತರ ಸಿಗಲಿದೆಯೇ ಕಾದು ನೋಡಬೇಕು.