ಕೆ.ಆರ್. ಪುರ, ಅ. 13: ಮಹರ್ಷಿ ವಾಲ್ಮೀಕಿಯವರ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬೆಂ.ಪೂರ್ವ ತಾಲ್ಲೂಕು ತಹಶಿಲ್ದಾರ್ ಡಾ. ತೇಜಸ್ ಕುಮಾರ್ ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ಸಮಾಜಮುಖಿಯಾಗಿ ತತ್ವಗಳನ್ನು ನೀಡಿದ ಮಹಾನ್ ಜ್ಞಾನಿ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿಯಿಂದ ಪೇರಿತರಾದ ಪ್ರತಿಯೊಬ್ಬರು ಸಮಾಜದ ಹಿತದೃಷ್ಟಿಯಿಂದ ಚಿಂತನೆ ಆಲೋಚನೆ ಮಾಡಿ ಸಮಾಜದ ಏಳಿಗೆಗೆ ಕ್ರಮ ಕೈಗೊಂಡಿದ್ದಾರೆ ಎಂದು ನುಡಿದರು.
ಸತ್ಯ, ನೀತಿ, ನಿಷ್ಠೆಯನ್ನು ಪ್ರತಿಯೊಬ್ಬ ಪ್ರಜೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ತಮ್ಮ ಜೀವನ ಶೈಲಿ ಹಾಗೂ ಉತ್ತಮ ಸಮಾಜಕ್ಕೆ ನಾಂದಿಗೆ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ದೇಶದ ಜನರಿಗೆ ವಾಲ್ಮೀಕಿ ಅವರು ನೀಡಿದ ಮಹಾನ್ ಗ್ರಂಥ ರಾಮಾಯಣ ಅತ್ಯಮೂಲ್ಯವಾದದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕ ಮಹಾ ಸಂಘದ ರಾಜ್ಯಾಧ್ಯಕ್ಷ ಅಂಜಿನಪ್ಪ, ಕೆ.ಆ
ರ್.ಪುರ ವಿಭಾಗದ ಅದ್ಯಕ್ಷ ನಾಗರಾಜ್, ಗೌರವ ಅದ್ಯಕ್ಷ ರಾಮಚಂದ್ರಪ್ಪ, ಬೆ.ಪೂರ್ವ ತಾಲ್ಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್, ಇ ಒ ಮಂಜುನಾಥ್, ಯುವ ಮುಖಂಡ ಅಜಯ್ ನಾಯಕ ಸೇರಿದಂತೆ ಇತರರು ಹಾಜರಿದ್ದರು.