ಜಪಾನ್ ಗೆ ಅಪ್ಪಳಿಸಿದ ಚಂಡಮಾರುತ

ಜಪಾನ್ ಗೆ ಅಪ್ಪಳಿಸಿದ ಚಂಡಮಾರುತ

ಟೋಕಿಯೋ, ಅ. 13 : ದ್ವೀಪರಾಷ್ಟ್ರ ಜಪಾನ್ ಗೆ ಪ್ರಬಲ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು, ಪರಿಣಾಮ ಜಪಾನ್ ನಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆ. ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಜಪಾನಿನ ಟೋಕಿಯೋ ಮೆಟ್ರೋಪೊಲಿಸ್ ಸೇರಿದಂತೆ ಹಲವೆಡೆ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ಥಳ ತೊರೆಯುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಅವರ ಜೀವಕ್ಕೆ ಮತ್ತು ಆರೋಗ್ಯಕ್ಕೆ ಅಪಾಯದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಚೀಬಾ ಪರ್ಫೆಕ್ಚರ್ ನ ಇಚಿಹರಾದಲ್ಲಿ ಸುಂಟರಗಾಳಿಗೆ ಓರ್ವ ಬಲಿಯಾಗಿದ್ದು ಮೂವರು ಮಕ್ಕಳು ಸೇರಿದಂತೆ ಐವರಿಗೆ ಗಾಯಗಳಾಗಿವೆ. ಅಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಟೋಕಿಯೋದಲ್ಲಿ ಪ್ರತೀಕೂಲ ಹವಾಮಾನ ಹಿನ್ನೆಲೆಯಲ್ಲಿ ಅಲ್ಲಿನ ಅಂಗಡಿ ಮುಂಗಟ್ಟುಗಳು ಶನಿವಾರ ಮುಚ್ಚಿವೆ ಎಂದು ವರದಿಯಾಗಿದೆ.
11 ಸಾವು, ಹಲವರ ನಾಪತ್ತೆ
ಇನ್ನು ಹೆಗ್ ಬಿಸ್ ಚಂಡಮಾರುತದ ಪರಿಣಾಮ ಜಪಾನ್ ನಲ್ಲಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos