ಯಾದಗಿರಿ, ಅ. 11 : ರಸ್ತೆ ಮಧ್ಯೆ ಕಾಶಿವಿಶ್ವನಾಥ ಸ್ವಾಮೀಜಿಯನ್ನು ಅರೆ ಬೆತ್ತಲೆ ಮಾಡಿ ತಳಿಸಿರುವಬ ಘಟನೆ ಕೊಪ್ಪಳ ತಾಲೂಕಿನ ಯಲಬುರ್ಗಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ದೇವದುರ್ಗ ತಾಲೂಕಿನ ಕರಗುಡ್ಡಿ ಗ್ರಾಮದ ಹೂಗಾರ ಸಮಾಜದ ಸ್ವಾಮೀಜಿ ಕಾಶಿವಿಶ್ವನಾಥ್. ಕಳೆದ ತಿಂಗಳು 20ರಂದು ಭಕ್ತರ ಮನೆಯಲ್ಲಿ ತಂಗಿದ ವೇಳೆ ಈ ಘಟನೆ ನಡೆದಿದ್ದು, ಯುವತಿಯ ಅಂದ ಚಂದಕ್ಕೆ ಮನಸೋತು, ಯುವತಿಗೆ ಮದುವೆ ಆಗೋಣ ಎಂದು ತಿಳಿಸಿದ್ದ. ವಿಷಯ ಯುವತಿ ಕುಟುಂಬಸ್ಥರ ಮುಂದೆ ಹೇಳಿದಾಗ, ಆಗ ಕುಟುಂಬಸ್ಥರಿಗೆ ಕಪಟ ಸ್ವಾಮೀಜಿ ಎನ್ನುವುದು ಗೊತ್ತಾಗಿದೆ. ಯುವತಿಯ ಕುಟುಂಬಸ್ಥರಿಂದ, ರಸ್ತೆ ಮಧ್ಯೆ ಕಾಶಿವಿಶ್ವನಾಥ ಸ್ವಾಮೀಜಿ ಅರೆ ಬೆತ್ತಲೆ ಮಾಡಿ ತಳಿಸಿದ್ದಾರೆ.