ಕೆ.ಆರ್.ಪುರ, ಅ. 11: ವಿಶ್ವ ಮಾನಸಿಕ ಆರೋಗ್ಯ ಮತ್ತು ಅಂಧತ್ವ ನಿವಾರಣಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಯೋನಿಕಾ ಐ ಕೇರ್ ಟ್ರಸ್ಟ್ ಸಹ ಯೋಗದೊಂದಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬಿದರಹಳ್ಳಿ ಹೋಬಳಿ ಚಿಕ್ಕಗುಬ್ಬಿಯ ನ್ಯೂ ಅರ್ಕ್ ಮಿಷನ್ ಆಫ್ ಇಂಡಿಯಾ, ಹೋಂ ಆಫ್ ಹೋಪ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ಮತ್ತು ಅಂಧತ್ವ ನಿವಾರಣಾ ದಿನಾಚರಣೆಯಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ನದೀಂ ಅಹಮ್ಮದ್ ಪಾಲ್ಗೊಂಡು ಮಾತನಾಡಿದ ಅವರು, ನ್ಯೂ ಅರ್ಕ್ ಮಿಷನ್ ಆಫ್ ಇಂಡಿಯಾ, ಹೋಂ ಆಫ್ ಹೋಪ್ ಸಂಸ್ಥೆಯಲ್ಲಿರುವ ಸಮಾರು 300ಕ್ಕೂ ಹೆಚ್ಚು ಜನರಿಗೆ ಮಾನಸಿಕ ಆರೋಗ್ಯ ತಪಾಸಣೆ, ದೃಷ್ಠಿ ತಪಾಸಣೆ, ರಕ್ತದೊತ್ತಡ , ಸಕ್ಕರೆ ಕಾಯೆಲೆ ಹಾಗೂ ಇತರೆ ಸಾಮಾನ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ದೃಷ್ಟಿ ತಪಾಸಣೆಯಲ್ಲಿ ಸುಮಾರು 62 ರೋಗಿಗಳಿಗೆ ಉಚಿತ ಕನ್ನಡಕ ನೀಡುವಂತೆ ಸೂಚಿಸಲಾಗಿದ್ದು 26 ರೋಗಿಗಳಿಗೆ ಕಣ್ಣಿನ ಪೊರೆ ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡುವಂತೆ ನಯೋನಿಕಾ ಐ ಕೇರ್ ಚಾರಿಟೇಬಲ್ ಟ್ರಸ್ಟ್ ಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆ.ಪೂ.ತಾಲ್ಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ಮತ್ತು ಅಂಧತ್ವ ನಿವಾರಣಾ ದಿನಾಚರಣೆಯ ಅಂಗವಾಗಿ ಚಿಕ್ಕಗುಬ್ಬಿಯಲ್ಲಿ ಆಟೋ ರಾಜ ನಡೆಸುತ್ತಿರುವ ಅನಾಥಶ್ರಮದಲ್ಲಿ ಮಾನಸಿಕ ಹಾಗೂ ದೃಷ್ಟಿ ಸಮಸ್ಯೆ ಇರುವ ವರನ್ನು ಪತ್ತೆಹಚ್ಚಿ ಅಂತಹವರಿಗೆ
ಸೂಕ್ತ ಚಿಕಿತ್ಸೆ, ಔಷಧ ಹಾಗೂ ಕನ್ನಡಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ವೈದ್ಯಾಧಿಕಾರಿ ಡಾ.ರಜಿನಿ, ಡಾ.ಚೇತನ್ ಕುಮಾರ್, ಡಾ.ಉಮಾ ರಾಕೇಶ್, ಅರೋಗ್ಯ ನಿರೀಕ್ಷ ಬಾಬು, ಹೋಂ ಆಫ್ ಹೋಪ್ ಅಧ್ಯಕ್ಷ ಆಟೋ ರಾಜ ಸೇರಿದಂತೆ ಇತರರು ಹಾಜರಿದ್ದರು.