ಮಾಜಿ ಕೇಂದ್ರ ಸಚಿವ ಜಾಲಪ್ಪ ಮಗನ ಮನೆ ಮೇಲೆ ಐಟಿ ದಾಳಿ

ಮಾಜಿ ಕೇಂದ್ರ ಸಚಿವ ಜಾಲಪ್ಪ ಮಗನ ಮನೆ ಮೇಲೆ ಐಟಿ ದಾಳಿ

ದೊಡ್ಡಬಳ್ಳಾಪುರ, ಅ. 10: ಮಾಜಿ ಕೇಂದ್ರ ಸಚಿವ ಜಾಲಪ್ಪನವರ ಮೂರನೇ ಮಗ ಜೆ ರಾಜೇಂದ್ರ ಕುಮಾರ್ ಅವರ ದೊಡ್ಡಬಳ್ಳಾಪುರದ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆದಿದೆ. ಕೋಲಾರದ ಟಮಕ  ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರು ಸಹ ಆಗಿದ್ದರು.

ಈಗ ದೊಡ್ಡಬಳ್ಳಾಪುರ ದಲ್ಲಿರುವ ಜಾಲಪ್ಪ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾಗಿದ್ದಾರೆ. ಅಲ್ಲದೇ ಬಹುತೇಕ ಕಾಲೇಜು ಮತ್ತು ಜಾಲಪ್ಪನವರ ಇತರೆ ವ್ಯವಹಾರಗನ್ನು ನೋಡಿಕೊಳ್ಳುತ್ತಿದ್ದಾರೆ. ಐಟಿ ಇಲಾಖೆ ಕೋಲಾರದ ಮೆಡಿಕಲ್ ಕಾಲೇಜ್ ಮೇಲು ದಾಳಿ ನಡೆಸಿದೆ.

ಜೆ. ರಾಜೇಂದ್ರ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದವರು.ತಾಲೂಕಿನಲ್ಲಿ ಚುನಾಚಣೆ ಬಂದಾಗಲೆಲ್ಲಾ ಅವರ ಅಣ್ಣ ನರಸಿಂಹಸ್ವಾಮಿ ಅಭ್ಯರ್ಥಿಯಾದಾಗ ರಾಜೇಂದ್ರ ಪ್ರಮುಖ ಪಾತ್ರ ವಹಿಸುತ್ತಿದ್ದರು. ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ ನಿವಾಸದ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ಖಾಸಗಿ ಕಾರುಗಳಲ್ಲಿ ಬಂದು ದಾಳಿ ನಡೆಸಿದ್ಧಾರೆ.

ಕೆಲವು ಲಾಕರ್ ಗಳಿಗೆ ಸಂಬಂಧಿಸಿದಂತೆ ರಾಜೇಂದ್ರ ಅವರು ಕೀ ಇಲ್ಲ ಅಂತ ಹೇಳಿದ್ದು,ಲಾಕರ್ ಗಳನ್ನು ತೆರೆಯಲು ಬೀಗ ರಿಪೇರಿ ಮಾಡುವವರನ್ನು ಕರೆಸಿ ಲಾಕರ್ ಗಳನ್ನು ತೆರೆದಿದ್ದಾರೆ. ಅಷ್ಟೇ ಅಲ್ಲ ರಾಜೇಂದ್ರ ಮತ್ತು ಅವರ ಪತ್ನಿಯನ್ನು ಬ್ಯಾಂಕಿನಲ್ಲಿರುವ ಲಾಕರ್ ಗಳನ್ನು ತೆರೆಯಲು ಬ್ಯಾಂಕಿಗೆ ಕರೆದೊಯ್ದರು.

 

ಫ್ರೆಶ್ ನ್ಯೂಸ್

Latest Posts

Featured Videos