ಬೆಂಗಳೂರು, ಅ.10 : ಟೈಟಲ್ ಮತ್ತು ಟೀಸರ್ಗಳಿಂದ್ಲೇ ಸ್ಯಾಂಡಲ್ವುಡ್ ಅಂಗಳದಲ್ಲಿ ಕುತೂಹಲ ಕೆರಳಿಸಿರೋ ಸಿನಿಮಾ ಶ್ರೀ ಭರತ ಬಾಹುಬಲಿ. ಮಂಜು ಮಾಂಡವ್ಯ ನಿರ್ದೇಶನದ ಜೊತೆಗೆ ಭರತನಾಗಿ ಬಣ್ಣ ಹಚ್ಚಿದ್ರೆ, ಚಿಕ್ಕಣ್ಣ ಬಾಹುಬಲಿಯಾಗಿ ಸಾಥ್ ಕೊಟ್ಟಿದ್ದಾರೆ. ಎಲ್ಲಾ ಕಮರ್ಷಿಯಲ್ ಅಂಶಗಳನ್ನ ಬೆರಸಿ ಮಾಡ್ತಿರೋ ಈ ಸಿನಿಮಾ ಟ್ರೈಲರ್ ಅನ್ನ ರಿಯಲ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿದ್ದಾರೆ.
ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಕಾಂಬಿನೇಷನ್ನಲ್ಲಿ ಬರ್ತಿರೋ ಕಮರ್ಷಿಯಲ್ ಎಂಟ್ರಟ್ರೈನರ್ ಸಿನಿಮಾ ಶ್ರೀ ಭರತ ಬಾಹುಬಲಿ. ಮಾಸ್ಟರ್ಪೀಸ್ ನಂತ್ರ ಮಂಜು ಮಾಂಡವ್ಯ ನಿರ್ದೇಶಿಸ್ತಿರೋ ಎರಡನೇ ಸಿನಿಮಾ ಇದು. ಮಂಜು ಮಾಂಡವ್ಯ ನಿರ್ದೇಶನದ ಜೊತೆಗೆ ಭರತನಾಗಿ ಲೀಡ್ ರೋಲ್ ಪ್ಲೇ ಮಾಡಿದ್ದು, ಚಿಕ್ಕಣ್ಣ ಅವ್ರಿಗೆ ಜೊತೆಯಾಗಿದ್ದಾರೆ. ಹಳ್ಳಿ ಹಿನ್ನಲೆಯ ಸಿನಿಮಾದಲ್ಲಿ ಲೋಕಲ್ ಬೆಂಕಿ ಬಾಯ್ಸ್ ಆಗಿ ಇಬ್ರು ಪ್ರೇಕ್ಷಕರನ್ನ ರಂಜಿಸೋಕ್ಕೆ ಬರ್ತಿದ್ದಾರೆ.