ಯೂನಸ್ ಗೆ ವಾರೆಂಟ್ ಜಾರಿ

ಯೂನಸ್ ಗೆ ವಾರೆಂಟ್ ಜಾರಿ

ಢಾಕಾ, ಅ. 10 : ಬಾಂಗ್ಲಾದೇಶದ ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪುರಸ್ಕೃತ 79 ವರ್ಷದ ನೋಬೆಲ್ ಶಾಂತಿ ಪುರಸ್ಕೃತ ಪ್ರೊ. ಮುಹಮ್ಮದ್ ಯೂನಸ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ತಮ್ಮ ಒಡೆತನದ ಕಂಪೆನಿಯಿಂದ ಕಾರ್ಮಿಕರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನದ ವಾರೆಂಟ್ ಜಾರಿಯಾಗಿದೆ. ತನ್ನದೇ ಗ್ರಾಮೀಣ್ ಕಮ್ಯೂನಿಕೇಷನ್ ಸಂಸ್ಥೆ ಅಧ್ಯಕ್ಷರು ಆಗಿರುವ ಮುಹಮ್ಮದ್ ಅವರು ಕೆಲ ನೌಕರರನ್ನು ಉದ್ಯೋಗದಿಂದ ಕಿತ್ತು ಹಾಕಿದ್ದರು. ಕಾರ್ಮಿಕ ಒಕ್ಕೂಟವನ್ನು ಸ್ಥಾಪಿಸಿದ ಕಾರಣಕ್ಕೆ ಗ್ರಾಮೀಣ್ ಕಮ್ಯೂನಿಕೇಷನ್ ನಿಂದ ಸಿಬ್ಬಂದಿಯನ್ನು ತೆಗೆಯಲಾಗಿತ್ತು. ಇದರ ವಿರುದ್ಧ ಕಾರ್ಮಿಕ ಒಕ್ಕೂಟ ವಿರುದ್ಧ ಪ್ರತಿಭಟನೆ ನಡೆಸಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos