ಯುವಕ ನೀರು ಪಾಲು

ಯುವಕ ನೀರು ಪಾಲು

ಬೇಲೂರು, ಅ. 9 : ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಪ್ರಕರಣ ಬೇಲೂರು ಪಟ್ಟಣ ಸಮೀಪದ ನಿಡಗೋಡು ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ತಮ್ಮಯ್ಯ ಎಂಬುವವರ ಪುತ್ರ ಪವನ್(16) ಮೃತ ದುರ್ದೈವಿ. ಈತ ಮಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೆ ಎಸ್ಎಸ್ಎಲ್ಸಿ ಅರ್ದ ವಾರ್ಷಿಕ ಪರೀಕ್ಷೆ ಬರೆದಿದ್ದ, ದಸರಾ ರಜೆ ಹಿನ್ನೆಲೆ ಊರಿಗೆ ಬಂದಿದ್ದನ್ನು. ಆದರೆ ಸೋಮವಾರ ಆಯುಧ ಪೂಜೆ ಆಚರಿಸಿದ ಪವನ್, ಮಂಗಳವಾರ ಗ್ರಾಮದ ಕೆಲ ಸ್ನೇಹಿತರೊಂದಿಗೆ ನಿಡಗೋಡು ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos