ಶೆಟ್ಟರ್ ಹೊಸ ಬಾಂಬ್

ಶೆಟ್ಟರ್ ಹೊಸ ಬಾಂಬ್

ಹುಬ್ಬಳ್ಳಿ, ಅ.8 : ಜೆಡಿಎಸ್ ನಿಂದ ಮತ್ತಷ್ಟು ಶಾಸಕರು ಹೊರಗೆ ಬರುತ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಮಂಗಳವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ ಪಕ್ಕದಲ್ಲಿ ಕುರುತ್ತಿದ್ದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮೈತ್ರಿ ಕಳೆದುಕೊಂಡ ಮೇಲೆ ತಾವೇ ಜಗಳವಾಡುತ್ತಿದ್ದಾರೆ. ಪಾಪದ ಕೋಡ ತುಂಬಿತ್ತನೊ ಮೈತ್ರಿ ಬಿದ್ದು ಹೋಯಿತು. ಜೆಡಿಎಸ್ ಪಕ್ಷ ಬಿಟ್ಟು ಶಾಸಕರು ಹೊರಗೆ ಬರುತ್ತಾರೆಂದು ಜೆಡಿಎಸ್ ನಾಯಕರಗಳೆ ಹೇಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡುವುದು ಸಹ ವಿರೋಧ ಅವರ ಪಕ್ಷದಲ್ಲಿ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos