ನವದೆಹಲಿ, ಅ. 8 : ಇಂದು ವಾಯುಪಡೆಯ ದಿನವಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಹೆಮ್ಮೆಯ ರಾಷ್ಟ್ರವು ನಮ್ಮ ವಾಯು ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ. ಭಾರತೀಯ ವಾಯುಪಡೆಯು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ವಾಯುಪಡೆಯ ಹಿಂಡನ್ ವಾಯುಪಡೆಯ ನಿಲ್ದಾಣವು ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ 8ನೇ ದೊಡ್ಡದಾಗಿದೆ. ಇದರ ಧ್ಯೇಯವಾಕ್ಯ ನಭಾ ಸ್ಪರ್ಶಂ ದೀಪ್ತಮ್ ಅನ್ನು ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ.
ಉತ್ತರಾಖಂಡದ ತನ್ನ ‘ರಾಹತ್’ ಕಾರ್ಯಾಚರಣೆಯ ಸಮಯದಲ್ಲಿ ಫ್ಲಾಶ್ ಪ್ರವಾಹದಲ್ಲಿ ಸುಮಾರು 20,000 ನಾಗರಿಕರನ್ನು ರಕ್ಷಿಸುವ ಮೂಲಕ ಐಎಎಫ್ ವಾಯುಯಾನದಲ್ಲಿ ವಿಶ್ವ ದಾಖಲೆ ಮಾಡಿದೆ. ಜರ್ಮನಿ, ಆಸ್ಟ್ರೇಲಿಯಾ ಮತ್ತು ಜಪಾನ್ಗಿಂತ ಐಎಎಫ್ ವಿಶ್ವದ ಏಳನೇ ಪ್ರಬಲ ವಾಯುಪಡೆಯಾಗಿದೆ. ಯುಎಸ್, ಚೀನಾ ಮತ್ತು ರಷ್ಯಾ ನಂತರ ಭಾರತೀಯ ವಾಯುಪಡೆಯು ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿದೆ. ಐಎಎಫ್ ಭಾರತದಾದ್ಯಂತ 60ಕ್ಕೂ ಹೆಚ್ಚು ವಾಯುನೆಲೆಗಳನ್ನು ಹೊಂದಿದೆ.