ಮೈಸೂರು, ಅ. 8 : ವಿಶ್ವ ವಿಖ್ಯಾತ ದಸರಾ ಅಂತಿಮ ದಿನವಾದ ಇಂದು ವಿಜಯದಶಮಿ ಉತ್ಸವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೀತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದರು.
ಮೈಸೂರು ಸುತ್ತೂರು ಮಠದಲ್ಲಿ ಶ್ರೀಗಳ ಆರ್ಶೀವಾದ ಪಡೆದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಈಗಾಗಲೇ 40 ಲಕ್ಷಕ್ಕೂ ಹೆಚ್ವು ಜನ ಮೈಸೂರಿಗೆ ಬಂದು ಹೋಗಿದ್ದಾರೆ. ಜಂಬೂ ಸವಾರಿಗೆ ವಿಶೇಷ ರೀತಿಯಲ್ಲಿ ಏರ್ಪಾಡು ಮಾಡಲಾಗಿದೆ.
ಅಲ್ಲದೇ ಲಕ್ಷಾಂತರ ಜನ ಇವತ್ತು ಜಂಬೂ ಸವಾರಿ ಕಣ್ತುಂಬಿಕೊಳ್ಳಲಿದ್ದಾರೆ. ಚಾಮುಂಡಿ ದಯೆಯಿಂದ ಒಳ್ಳೆ ರೀತಿ ನಡೆಯಲಿ ಅಂತಾ ಪ್ರಾರ್ಥಸುತ್ತೇನೆ. ಇಂದು ಸಂಜೆ ಪಂಜಿನ ಕವಾಯತು ಕೂಡ ನಡೆಯಲಿದೆ. ಉದ್ಘಾಟನೆಗೆ ರಾಜ್ಯಪಾಲ ವಜುಭಾಯ್ ವಾಲ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.