ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಜಡೇಜಾ

ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಜಡೇಜಾ

ವಿಶಾಖಪಟ್ಟಣ, ಅ. 6 : ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ತನ್ನದೇ ಬೌಲಿಂಗ್ ನಲ್ಲಿ ಕ್ಯಾಚ್ ಹಿಡಿದ ಜಡೇಜಾ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಕಾರಣರಾದರು.
ಆಫ್ರಿಕಾ ಆಟಗಾರ ಏಡನ್ ಮಾಕ್ರಮ್ 39 ರನ್ ಗಳಿಸಿ ಆಡುತ್ತಿದ್ದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮಾಕ್ರಮ್ ಕ್ರೀಸ್ ಗೆ ಕಚ್ಚಿ ಆಡುತ್ತಿದ್ದರು. ಈ ವೇಳೆ ಜಡೇಜಾ ಎಸೆತವನ್ನು ಲಾಂಗ್ ಆನ್ ಅತ್ತ ಹೊಡೆದ ಮಾಕ್ರಮ್ ಗೆ ಜಡೇಜಾ ಜಾಲಕ್ಕೆ ಬಿದ್ದಿದ್ದೆ ತಿಳಿಯಲಿಲ್ಲ.
ಮಾಕ್ರಮ್ ಹೊಡೆತವನ್ನು ಒಂದೇ ಕೈಯಲ್ಲಿ ಹಿಡಿದ ಜಡೇಜಾ ಭಾರತಕ್ಕೆ ಮೇಲುಗೈ ದೊರಕಿಸಿದರು. ಅದೇ ಓವರ್ ನಲ್ಲಿ ಕೇಶವ ಮಹರಾಜ ಮತ್ತು ಫಿಲಾಂಡರ್ ವಿಕೆಟ್ ಪಡೆದ ಜಡೇಜಾ ಹರಿಣಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದರು.

ಫ್ರೆಶ್ ನ್ಯೂಸ್

Latest Posts

Featured Videos