ಬೆಳಗಾವಿ, ಅ. 3 : ಸತ್ಯ ಹೇಳುವವರನ್ನು ಕಂಡರೆ ಬಿಜೆಪಿಗೆ ಆಗಿ ಬರುವುದಿಲ್ಲ. ನಿಜವಾದ ಸಂಗತಿ ಹೇಳಿದವರನ್ನು ದೇಶದ್ರೋಹಿಗಳು ಎನ್ನುವದು ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನೆರೆ ಸಂತ್ರಸ್ತರಿಗೆ ಪರಿಹಾರದ ವಿಷಯದ ಬಗ್ಗೆ ಮಾತನಾಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ ದೇಶದ್ರೋಹ ಪಟ್ಟ ಕಟ್ಟಿದ್ದಾರೆ ಎಂದು ಟೀಕಿಸಿದರು.