ನೆಲಮಂಗಲ, ಅ. 2: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಹಿನ್ನಲೆ ಬೆಂಗಳೂರಿನ ರಾಜಾಜಿನಗರ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಪರಿಸರ ಸಂರಕ್ಷಣೆಗಾಗಿ ಸಾವಿರಾರು ಗಿಡ ನೆಡುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.
ನೆಲಮಂಗಲ ಸಮೀಪದ ಸೊಂಡೇಕುಪ್ಪ ಗ್ರಾಮದ ಕೆರೆಯ ಅಂಗಳದಲ್ಲಿ ಸಂಘದ ವತಿಯಿಂದ ನೂರಾರು ಜನ ಒಟ್ಟಿಗೆ ಸೇರಿ ಕೆರೆಯ ಅಂಗಳದಲ್ಲಿ ಸಾವಿರಾರು ವಿವಿಧ ಜಾತಿಯ ಗಿಡಗಳನ್ನ ನಮ್ಮ ಗ್ರಾಮ ನಮ್ಮ ಕೆರೆ ಎಂಬ ಶೀಶಿಕೆಯ ಅಡಿ ಪರಿಸರದ ಜಾಗೃತಿ ಮೂಡಿಸುವ ಮೂಲಕ ಮಹಾತ್ಮ ಗಾಂಧಿ ಜಯಂತಿಯನ್ನ ಆಚರಿಸಿದರು. ಇವರ ಕಾರ್ಯಕ್ಕೆ ಸೊಂಡೇಕುಪ್ಪ ಗ್ರಾಮಸ್ಥರು ಸಹ ಮೆಚ್ಚುಗೆಯನ್ನ ವ್ಯಕ್ತಪಡಿಸಿ ಬೆಂಗಳೂರಿಗರಿಗೆ ಸಾತ್ ನೀಡಿದರು.