ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ

ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ

ಪೀಣ್ಯ ದಾಸರಹಳ್ಳಿ, ಅ. 2: ಮಲ್ಲಸಂದ್ರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮನಸುಜ್ಞಾನ ಚಾರಿಟೇಬಲ್ ಟ್ರಸ್ಟ್ (ರಿ)ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು  ವಿತರಿಸಲಾಯಿತು. ಕಾರ್ಯಕ್ರಮದಲ್ಲಿ  ಟ್ರಸ್ಟ್ ಅಧ್ಯಕ್ಷ  ಎಚ್.ಎಲ್. ಮಂಜಪ್ಪ ಉಪಾಧ್ಯಕ್ಷ  ಎಚ್. ಸಿ. ನಾಗರಾಜ್, ಕಾರ್ಯದರ್ಶಿ ಹಣಮಂತಯ್ಯ, ಟ್ರಸ್ಟ್ ಪದಾಧಿಕಾರಿಗಳಾದ ಅರ್ಪಿತಾ ಪ್ರತಾಪ್ ಚಂದ್ರ, ಶೆಟ್ಟಿ, ಜಯಲಕ್ಷ್ಮಮ್ಮ, ಶಾಲಾ ಮುಖ್ಯಶಿಕ್ಷಕಿ ರುಕ್ಮಿಣಿಯಮ್ಮ, ಶಾಲಾ ಶಿಕ್ಷಕ ವೆಂಕಟೇಶ್ ಹಾಗೂ ಶಾಲಾ ಸಿಬ್ಬಂದಿ ವರ್ಗ ಮಕ್ಕಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos