ಬೆಂಗಳೂರು, ಸೆ. 30 : ನಾನು ಯಾವತ್ತೂ ಟೆನ್ಷನ್ ಮಾಡಿಕೊಂಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ನನಗೆ ಯಾವುದೇ ಟೆನ್ಷನ್ ಆಗಿರಲಿಲ್ಲ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದರು.
ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ಧಾರ ಅಥವಾ ಚರ್ಚೆ ಮಾಡಿಲ್ಲ. ಯಾವ ಸಭೆಯೂ ಆಗಿಲ್ಲ ಎಂದರು.
ಬಣಕಾರ್ ವಿರುದ್ಧ ಈಗ ಹಿಂದಿನಿಂದಲೂ ಸ್ಪರ್ಧೆ ಮಾಡ್ತಿಲ್ಲ. ಆದರೆ ಈ ಬಾರಿ ಸ್ಪರ್ಧೆ ಮಾಡುವ ಸ್ಥಿತಿ ಉದ್ಭವಿಸೊಲ್ಲ ಎಂಬ ನಂಬಿಕೆ ಇದೆ. ಎಲ್ಲವೂ ಸರಿ ಹೋಗುತ್ತದೆ ಎಂಬ ಭರವಸೆ ಇದೆ ಎಂದು ಬಿ. ಸಿ ಪಾಟೀಲ್ ಹೇಳಿದರು.