ಬಾಗಲಕೋಟೆ, ಸೆ. 30 : ರಾಮ ಬಾಣದಂತಿರೋ ಮಿನಿ ಜಲಪಾತ ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದಲ್ಲಿದೆ. ಇಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖ ಎಂಬುವುದು ಸ್ಥಳೀಯರ ಬಲವಾದ ನಂಬಿಕೆ. ಹಾಗಾಗಿ ಪ್ರತಿಬಾರಿಯೂ ಈ ಜಲಪಾತ ತುಂಬಿದಾಗ ಬಹುತೇಕರು ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.
ಬೆಟ್ಟದಲ್ಲಿ ಬೇರುಗಳ ಮಧ್ಯೆ ನೀರು ಬರೋದ್ರಿಂದ ಇದು ಔಷಧೀಯ ಗುಣ ಹೊಂದಿದೆ. ಹಾಗಾಗಿ ಇಲ್ಲಿ ಸ್ನಾನ ಮಾಡಿದರೆ ರೋಗಗಳು ಗುಣಮುಖವಾಗುತ್ತೇವೆ ಎಂದು ಸ್ಥಳೀಯರಾದ ರಮೇಶ್ ಶಾಂತಗೇರಿ ಹೇಳುತ್ತಾರೆ.