ಬಾಗಲಕೋಟೆ, ಸೆ.26 : ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರಿಯ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಇದೀಗ ಈ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.
ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಅವರಿಗೆ ಮೊಬೈಲ್ ಸೇರಿದ್ದಾಗಿದೆ. ಸೆ.13 ರಂದು ಬೆಂಗಳೂರಿನ ಗಾಂಧಿ ಭವನದ ಸಚಿವರ ನಿವಾಸದಿಂದ ಮೊಬೈಲ್ ಕಳುವಾಗಿತ್ತು. ಈ ಸಂಬಂಧ ಶಾಂತಾ ಅವರು ಬೆಂಗಳೂರಿನ ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನನ್ವಯ ಕಾರ್ಯಾಚರಣೆ ಆರಂಭಸಿದ್ದ ಪೊಲೀಸರಿಗೆ ಬಾಗಲಕೋಟೆ ಜಿಲ್ಲೆಯ ಬಂಟನೂರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ್ ಎಂಬಾತನ ಬಳಿ ಮೊಬೈಲ್ ಪತ್ತೆಯಾಗಿದೆ. ಹೀಗಾಗಿ ಲೋಕಾಪುರ ಪೋಲಿಸರ ಮೂಲಕ ಮೊಬೈಲ್ ಅನ್ನು ಬೆಂಗಳೂರಿಗೆ ತರಿಸಿಕೊಂಡ ಪೋಲಿಸರು.
ಐಎಮ್ಇಐ ನಂಬರ್ ಮೂಲಕ ಮೊಬೈಲ್ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೋಲಿಸರು ಯಶಸ್ವಿಯಾಗಿದ್ದಾರೆ