ಬೆಳಗಾವಿ, ಸೆ. 26 : ಪತಿ ಮೃತಪಟ್ಟ ಕೆಲವೇ ಕ್ಷಣದಲ್ಲಿ ಪತ್ನಿಯೂ ಮೃತಪಟ್ಟು, ಸಾವಿನಲ್ಲೂ ಒಂದಾದ ಘಟನೆ ಭಾಗ್ಯ ನಗರದಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಅವರ ಪತ್ನಿ ನಿವೃತ್ತ ಶಿಕ್ಷಕಿ ಅಲಕಾ ಗುರುರಾಜ ಅಧ್ಯಾಪಕ (84) ಸಾವಿನಲ್ಲೂ ಒಂದಾದ ದಂಪತಿ.
ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲಿನಂತೆ ಎರಗಿದಂತಾಯಿತು. ಈ ಆಘಾತದಿಂದ ಚೇತರಿಸಿಕೊಳ್ಳದೇ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಸಾವನ್ನಪ್ಪುವ ಮೂಲಕ ದಂಪತಿ ಸಾವಿನ ಬಳಿಕವೂ ಒಂದಾಗಿದ್ದಾರೆ. ದಂಪತಿ ಸಾವಿನ ಸುದ್ದಿ ತಿಳಿದ ಸ್ಥಳೀಯರು ತಂಡೋಪತಂಡವಾಗಿ ಅವರ ಮನೆಗೆ ತೆರಳಿ ದಂಪತಿಯ ಅಂತಿಮ ದರ್ಶನ ಪಡೆದರು.