ಬೆಂಗಳೂರು, ಸೆ. 25 : ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಉಪಚುನಾವಣೆ ಕೂಡ ಘೋಷಣೆಯಾಗಿದ್ದು, ಮುಂದಿನ ನಡೆ ಕುರಿತು ಚರ್ಚಿಸಲು ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಜಗನ್ನಾಥ ಭವನದಲ್ಲಿ ಸಂಜೆ 6 ಗಂಟೆಗೆ ಮುಖ್ಯಮಂತ್ರಿಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ಕಟೀಲ್ ನೇತೃತ್ವದಲ್ಲಿರಾಜ್ಯ ಬಿಜೆಪಿ ಕೋರ್ಕಮಿಟಿ ಸಭೈ ನಡೆಯಲಿದ್ದು, 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ, ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ನಡೆ ಸೇರಿ ಹಲವು ವಿಷಯಗಳ ಕುರಿತುಚರ್ಚೆ ನಡೆಯಲಿದೆ.