ಬೆಂಗಳೂರು, ಸೆ. 24 : ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆ 3,690 ರೂಪಾಯಿ ತಲುಪಿದ್ದರೆ, ಒಂದು ಕೆಜೆ ಬೆಳ್ಳಿ ಬೆಲೆ 50,070 ರೂ. ಆಗಿದೆ.
ನಿನ್ನೆ (ಸೋಮವಾರ) ದರಕ್ಕೆ ಹೋಲಿಸಿದರೆ, ಇಂದು (ಮಂಗಳವಾರ) 130 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಅದರಂತೆ ಬೆಳ್ಳಿ 1300 ರೂಪಾಯಿ ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ಚಿನ್ನ ಹಾಗೂ ಬೆಳ್ಳಿಯ ದರ ಗಣನೀಯವಾಗಿ ಏರಿಕೆಯಾಗುತ್ತಿದೆ.