ಈ ಸಿನಿಮಾದ ಬಹುತೇಕ ಶೂಟಿಂಗ್ ಈಗಾಗಲೇ ಮುಗಿದು ಹೋಗಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಚೈತನ್ಯ ಆ್ಯಕ್ಷನ್ ಕಟ್ ಹೇಳ್ತಾ ಇರೋ ಈ ಸಿನಿಮಾದ ಡಬ್ಬಿಂಗ್ ಹಾಗೂ ಕೆಲವು ಸೀನ್ಗಳ ಚಿತ್ರೀಕರಣವಷ್ಟೆ ಬಾಕಿ ಉಳಿದಿದ್ದು, ಕಂಪ್ಲೀಟ್ ಮಾಡಲು ಚಿರು ಹಾಗೂ ಶ್ರುತಿ ಒಪ್ಪಿಕೊಂಡಿದ್ದಾರೆ. ಆದ್ಯ ಅಂತ ಟೈಟಲ್ ಇಡಲಾಗಿರುವ ಸಿನಿಮಾದಲ್ಲಿ ಸಂಗೀತಾ ಭಟ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದ್ರೆ ಸ್ಯಾಂಡಲ್ವುಡ್ಗೆ ಗುಡ್ ಬೈ ಹೇಳಿರೋ ಸಂಗೀತಾ ಭಟ್, ಈ ಸಿನಿಮಾ ಕಂಪ್ಲೀಟ್ ಮಾಡಿ ಕೊಡ್ತಾರಾ ಎನ್ನುವುದು ಕುತೂಹಲದ ವಿಷಯವಾಗಿದೆ.
ಸ್ಯಾಂಡವುಡ್ ನ ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ವಿಸ್ಮಯ ಅನ್ನೋ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ರು, ಆ ಸಿನಿಮಾದ ಒಂದು ಸೀನ್ ಆ ಸೀನ್ನ ಶೂಟಿಂಗ್ ನಡುವೆ ಆದ ಘಟನೆ ಮೀಟು ಎಂಬ ಬಾಂಬ್ ನ್ನು ಸಿಡಿಸಿತ್ತು. ಸತತವಾಗಿ ಹಲವಾರು ದಿನಗಳು ಮಾಧ್ಯಮದಲ್ಲಿ ಮೀಟು
ಹರಿದಾಡಿತ್ತು. ಇಡೀ ಸರ್ಜಾ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಶ್ರುತಿ ಆರೋಪಕ್ಕೆ ಕೆಂಡ ಮಂಡಲವಾಗಿದ್ದರು. ಶ್ರುತಿ ಕೂಡ ಇಡೀ ಸರ್ಜಾ ಕುಟುಂಬವನ್ನೇ ಆರೋಪಿ ಸ್ಥಾನದಲ್ಲಿಟ್ಟು ಚಾಟಿ ಬೀಸಿದ್ದರು.
ಈಗ ಶ್ರುತಿ ಹರಿಹರನ್ ಹಾಗೂ ಸರ್ಜಾ ಮತ್ತೆ ಸಿನಿಮಾ ಒಂದಕ್ಕಾಗಿ ಒಂದಾಗ್ತಾ ಇದ್ದಾರೆ. ಹೌದು ಶ್ರುತಿ ಹರಿಹರನ್ ಹಾಗೂ ಚಿರಂಜೀವ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸ್ತಾ ಇದ್ದಾರಂತೆ. ತಮಿಳಿನ ಕ್ಷಣಂ ಸಿನಿಮಾದ ರಿಮೇಕ್ನಲ್ಲಿ ಶ್ರುತಿ ಹರಿಹರನ್ ಹಾಗೂ ಚಿರಂಜೀವ ಸರ್ಜಾ ನಟಿಸಿದ್ದಾರೆ.