ಕೋಡೇಲ ಶಿವಪ್ರಸಾದ ರಾವ್ ಆತ್ಮಹತ್ಯೆ

ಕೋಡೇಲ ಶಿವಪ್ರಸಾದ ರಾವ್ ಆತ್ಮಹತ್ಯೆ

ಹೈದರಾಬಾದ್, ಸೆ. 16: ಹಲವು ದಿನಗಳಿಂದ ಮಾನಸಿಕವಾಗಿ ಖಿನ್ನರಾಗಿದ್ದ ಆಂಧ್ರ ಪ್ರದೇಶದ ಮಾಜಿ ಸ್ಪೀಕರ್ ಹಾಗೂ ಟಿಡಿಪಿ ಮುಖಂಡ ಕೋಡೇಲ ಶಿವಪ್ರಸಾದ ರಾವ್ ಅವರು ಇಂದು ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿಬಂದಿದೆ. 72 ವರ್ಷದ ಶಿವ ಪ್ರಸಾದ ರಾವ್ ಅವರನ್ನು ಹೈದರಾಬಾದ್ನ ಬಸವತಾರಕಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಟಿಡಿಪಿ ಮುಖಂಡ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಶಿವಪ್ರಸಾದ ರಾವ್ ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಅವರ ಕುಟುಂಬದ ಮೂಲಗಳ ಪ್ರಕಾರ ಕೆಲವಾರು ದಿನಗಳಿಂದ ಅವರು ಮಾನಸಿಕವಾಗಿ ಖಿನ್ನರಾಗಿದ್ದರೆನ್ನಲಾಗಿದೆ.

ಇಂದು ಬೆಳಗ್ಗೆ ತಿಂಡಿ ತಿಂದು ನೇರವಾಗಿ ತಮ್ಮ ಕೋಣೆಗೆ ಹೋದವರು ಬಹಳ ಹೊತ್ತಾದರೂ ಹೊರಬರಲಿಲ್ಲ. ಒಳಗೆ ಹೋಗಿ ನೋಡಿದಾಗ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos