ಆನೇಕಲ್, ಸೆ. 6: ನಗರದಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವುನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ 12 ಜನಕ್ಕೆ ಗಂಭೀರ ಗಾಯಯಾಗಿದೆ. ತಮಿಳುನಾಡಿನ ಸೂಳಿಗಿರಿ ಟೌನ್ ಹೆದ್ದಾರಿ ಯಲ್ಲಿ ಘಟನೆ. ಮಹೇಂದ್ರ ಫೀಕಾಫ್ ನಿಯಂತ್ರಣ ತಪ್ಪಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವಘಡ. ಸ್ಥಳಕ್ಕೆ ಸೂಳಿಗಿರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.