ವಕೀಲರ ಸಲಹೆ ಪಡೆದ ಡಿಕೆಶಿ

  ವಕೀಲರ ಸಲಹೆ ಪಡೆದ ಡಿಕೆಶಿ

ನವ ದೆಹಲಿ, ಸೆ. 2 :  ದಿಲ್ಲಿಯ ಫ್ಲ್ಯಾಟ್ನಲ್ಲಿ ಪತ್ತೆಯಾದ 8.59 ಕೋಟಿ ರೂ. ಹಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್  ವಿಚಾರಣೆ ಜಾರಿ ನಿರ್ದೇಶನಾಲಯ(ಇ.ಡಿ) ಗೌರಿ-ಗಣೇಶ ಹಬ್ಬದ ದಿನವಾದ ಸೋಮವಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಎರಡು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದ ಕಾಂಗ್ರೆಸ್ನ ‘ಟ್ರಬಲ್ ಶೂಟರ್’ಡಿ.ಕೆ. ಶಿವಮಕುಮಾರ್ ರಜೆಯ ದಿನವಾದ ಭಾನುವಾರ ಕೊಂಚ ನಿರಾಳರಾಗಿದ್ದಾರೆ. ಹೀಗಾಗಿ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದರು. ಇ.ಡಿ ಕೇಳ ಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಸುಮಾರು 2 ತಾಸು ವಕೀಲರ ಸಲಹೆ ಪಡೆದುಕೊಂಡರು ಎನ್ನಲಾಗಿದೆ.

ಕೈನಾಯಕರ ಭೇಟಿ :  ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಗಡಿ ಬಾಲಕೃಷ್ಣ ಮತ್ತಿತರರು ಡಿಕೆಶಿಗೆ ಕರ್ನಾಟಕ ಭವನದಲ್ಲಿ ಭೇಟಿಯಾಗಿ ಧೈರ್ಯ ತುಂಬಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ”ರಾಜಕೀಯ ದುರುದ್ದೇಶದಿಂದ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು ನೀಡಿದ ಹೇಳಿಕೆ ಗಮನಿಸಿದರೆ ಇದು ರಾಜಕೀಯ ದುರುದ್ದೇಶದ ಪ್ರಕರಣವೆಂದು ಸ್ಪಷ್ಟವಾಗುತ್ತದೆ,”ಎಂದು  ಆರೋಪಿಸಿದರು. ”ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ಡಿಕೆಶಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ,” ಎಂದು ಆರೋಪಿಸಿದರು.

ಡಿಕೆ ಶಿ ತಾಯಿ ಕಣ್ಣೀರಿರು : ಗಣೇಶ ಹಬ್ಬದ ದಿನದಂದು ತಮ್ಮ ಪೂರ್ವಿಕರಿಗೆ ಎಡೆಯಿಟ್ಟು,  ಸಮಾಧಿಗೆ ಪೂಜೆ ಸಲ್ಲಿಸಲು ಮಾಜಿ ಸಚಿವ ಡಿ. ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಅವಕಾಶ ನೀಡದ ಹಿನ್ನೆಲೆ ಮನೆಗೆ ಬಾರದ ಡಿಕೆಶಿ ನೆನೆದು ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ. ಪ್ರತಿ ವರ್ಷ ಇಬ್ಬರು ಮಕ್ಕಳು ಮನೆಗೆ ಬರುತ್ತಿದ್ದರು. ಯಾವುದೇ ಕೆಲಸಗಳಿದ್ದರು ತಪ್ಪಿಸದೆ ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಿದ್ದರು ಎಂದು  ಗೌರಮ್ಮ ತಿಳಿಸಿದ್ದಾರೆ.  ಇಡಿ ಸಮನ್ಸ್ ಜಾರಿಯಿಂದ ಹಬ್ಬಕ್ಕೆ ಇಬ್ಬರು ಮಕ್ಕಳು ಬಂದಿಲ್ಲ. ನನ್ನ ಮಗ ಕೊಲೆ ಸುಲಿಗೆ ದರೋಡೆ ಮಾಡಿಲ್ಲ. ವ್ಯಾಪಾರ ವ್ಯವಹಾರ ನಡೆಸಿದ್ದಾರೆ ಅಷ್ಟೆ. ಅದು ಮಾಡುವುದು ತಪ್ಪೇ? ಎಂದು ಮಕ್ಕಳನ್ನ ನೆನಪಿಸಿಕೊಂಡು ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos