ಡೆಂಗ್ಯೂ ಜ್ವರ ಹಾಗೂ ಕುಷ್ಠ ರೋಗ ನಿರ್ಮೂನ ಅರಿವಿನ ಜಾಥ ಕಾರ್ಯಕ್ರಮ

ಡೆಂಗ್ಯೂ ಜ್ವರ ಹಾಗೂ ಕುಷ್ಠ ರೋಗ ನಿರ್ಮೂನ ಅರಿವಿನ ಜಾಥ ಕಾರ್ಯಕ್ರಮ

ಬೆಂಗಳೂರು, ಆ. 31: ಬೆಂಗಳೂರಿನ ಜಾಲಹಳ್ಳಿಯ ಕ್ಲಾರೆಟ್ ಕಾಲೇಜು ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಡೆಂಗ್ಯೂ ಜ್ವರ ಮತ್ತು ಕುಷ್ಠ ರೋಗ ನಿರ್ಮೂಲನ ಅರಿವಿನ ಜಾಥ ಕಾರ್ಯಕ್ರಮವನ್ನುಆಯೋಜಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಡಾ. ಸಾಬುಜಾರ್ಜ್ ರ‍್ಯಾಲಿಗೆ ಚಾಲನೆ ನೀಡಿದರು, ರೆ. ಫಾದರ್ ಅಬ್ರಹಾಂ ಪಿ.ಜೆ ಉಪಪ್ರಾಂಶುಪಾಲರು ಹಾಗೂ ಡಾ. ಲೀಲಾವತಿ, ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯ ನರೀಕ್ಷಕರಾದ ಅನಂತಕುಮಾರ್, ಮಾದೇಶ್. ಎನ್ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು, ಅರುಣ್ ಕುಮಾರಿ, ಶಶಿಕಲಾ. ಯು, ಜಾರ್ಜ್ ಡಿಮೆಟ್ರೋ, ಜಾನ್. ಈ.ವಿ., ಕಸೆಂಡರ್ ರಾಣಿ ಸಂಯೋಜಕರು ಉಪಸ್ಥಿತರಿದ್ದರು.

ಡಾ. ಲೀಲಾವತಿ ಮನೆಯಂಗಳದ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ, ಹೆಚ್ಚು ಮಲಿನವಾದ ಪ್ರದೇಶಗಳನ್ನು ಶುಚಿಗೊಳಿಸಿ, ಸೊಳ್ಳೆಗಳ ಬೆಳವಣಿಗೆಯಾಗದಂತೆ ಔಷಧಿಗಳನ್ನು ಸಿಂಪಡಿಸಿ ಹಾಗೂ ಕುಷ್ಠ ರೋಗದ ಬಗ್ಗೆ ಅರಿವು ಮುಖ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಕರ ಪತ್ರಗಳನ್ನು ಜಾಲಹಳ್ಳಿಯ ಬೀದಿಗಳಲ್ಲಿ ಹಂಚಿದರು ಹಾಗೂ ಅರಿವು ಮೂಡಿಸುವಂತಹ ಘೋಷಣೆಗಳನ್ನು ಕೂಗುತ್ತಾ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶ್ವಸಿಗೊಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos