ಜಮ್ಮು-ಕಾಶ್ಮೀರ, ಆ. 30 : ಕುತಂತ್ರಿ ಪಾಕ್ಗೆ ಭಾರತ ಮತ್ತೆ ಎಚ್ಚರಿಕೆ ರವಾನಿಸಿದೆ. ನೆರೆಹೊರೆಯರ ಜೊತೆ ಹೇಗಿರಬೇಕು ಅಂತ ಕಲಿತು ಅದರಂತೆ ಬದುಕಿ ಎಂದು ತಾಕೀತು ಮಾಡಿದೆ.
ಜಮ್ಮು-ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ನಿರಂತರವಾಗಿ ಸುಳ್ಳು ಹಬ್ಬಿಸುತ್ತಿರುವ ಕುತಂತ್ರಿ ಪಾಕ್ಗೆ ಭಾರತ ಮತ್ತೆ ಎಚ್ಚರಿಕೆ ನೀಡಿದೆ. ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಗೆ ಸುಳ್ಳು ಮಾಹಿತಿಯಿಂದ ಕೂಡಿರುವ ಪತ್ರ ಬರೆದಿರುವುದಕ್ಕೆ ಭಾರತ ತರಾಟೆಗೆ ತೆಗೆದುಕೊಂಡಿದೆ. ಪದೇ ಪದೇ ಭಾರತದ ಆಂತರಿಕ ವಿಚಾರ ಕೆದಕುತ್ತಿರುವುದಕ್ಕೆ ಕೆಂಡಕಾರಿದೆ.
ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಪಾಕ್ ನಿರಂತರವಾಗಿ ಪ್ರಚೋದನಕಾರಿ ಹೇಳಿಕೆ ನೀಡ್ತಿದೆ. ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಭಾರತದ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ವಾರ್ನ್ ಮಾಡಿದ್ದಾರೆ.