ಬೆಂಗಳೂರು, ಆ. 28: ನಮ್ಮ ದೈನಂದಿನ ಕೆಲಸಗಳಲ್ಲಿ ಒಂದೆ ಹತ್ತಿರ ಕುಳಿತು ನಾವು ಕೆಲಸ ಮಾಡುವುದರಿಂದ ನಮಗೆ ಬೊಜ್ಜು ಬೆಳೆಯುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿರುವುದು ಒಂದೇ ಸಮಸ್ಯೆ ಅದು ಬೊಜ್ಜು. ಏನೇ ವರ್ಕೌಟ್ ಮಾಡುತ್ತಿದ್ದರೂ ಸಹ ಈ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಿಮ್ಮ ದಿನನಿತ್ಯ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಪಾನೀಯಗಳನ್ನು ಸೇವಿಸಿದರೆ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸೈಡಿಗೆ ಇಡಬಹುದಾಗಿದೆ. ಹೌದು, ನಾವಿಂದು ಹೇಳುವ ಪಾನೀಯಗಳನ್ನು ನಿಮ್ಮ ಜೀರ್ಣ ಕ್ರಿಯೆಗೆ ಸಹಾಯವಾಗಿದೆ ಹಾಗೂ ಇದರಿಂದಾಗಿ ನಿಮ್ಮ ಬೊಜ್ಜನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ.
ಜೀರಾ ನೀರು
ನಮ್ಮ ದೇಹದ ಹೊಟ್ಟೆಯ ಬೊಜ್ಜನ್ನು ಕರಗಿಸಲು ಜೀರಾ ನೀರು ಹೆಚ್ಚಾಗಿ ಬಳಸಲಾಗುತ್ತದೆ. ಹಾಗೂ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ. 1 ಲೋಟ ನೀರಿಗೆ 1 ಟೀ ಚಮಚ ಜೀರಾ ಸೇರಿಸಿ ಮತ್ತು ರಾತ್ರಿಯಿಡೀ ಬಿಟ್ಟು, ಆ ಬಳಿಕ ಜೀರಾ ನೀರನ್ನು ಬೆಳಿಗ್ಗೆ ಕುಡಿಯಿರಿ.
ಸೋಂಪು ನೀರು
ನಿಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಮತ್ತು ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ ಈ ಸೋಂಪು. ಒಂದು ಟೀ ಚಮಚ ಸೋಂಪು ಬೀಜಗಳನ್ನು ನೀರಿನಲ್ಲಿ ಬೆರೆಸಿ ರಾತ್ರಿಯಿಡೀ ಬಿಡಿ. ಮರುದಿನ ಈ ನೀರನ್ನು ಸೋಸಿ ಆ ಬಳಿಕ ನೀರನ್ನು ಕುಡಿಯಿರಿ ಕೆಲವೇ ದಿನಗಳಲ್ಲಿ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ.