ವಿದ್ಯಾರ್ಥಿನಿ 80 ಅಡಿ ಆಳಕ್ಕೆ ಬಿದ್ದಳು!

ವಿದ್ಯಾರ್ಥಿನಿ 80 ಅಡಿ ಆಳಕ್ಕೆ ಬಿದ್ದಳು!

ಮೆಕ್ಸಿಕೋ ಸಿಟಿ, ಆ.28 : ವಿದ್ಯಾರ್ಥಿನಿಯೊಬ್ಬಳು ಯೋಗಾಸದ ಮಾಡುವ ವೇಳೆ 80 ಅಡಿ ಆಳಕ್ಕೆ ಬಿದ್ದು ಅದೃಷ್ಟವತ್ ಬದಕುಳಿದ್ದಾಳೆ. ಇದು ಮೆಕ್ಸಿಕೋದಲ್ಲಿ ನಡೆದ ಘಟನೆಯಾಗಿದೆ. 23 ವರ್ಷದ ಕಾಲೇಜ್ ವಿದ್ಯಾರ್ಥಿನಿ 6 ಮಹ ಡಿಯ ಅಪಾರ್ಟ್ಮೆಂಟ್ನ ಬಾಲ್ಕನಿಯ ತುದಿಯಲ್ಲಿ ನಿಂತು ಕ್ಲಿಷ್ಟಕರವಾದ ಯೋಗಾಸನ ಮಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕೆಳಕ್ಕೆ 80 ಅಡಿ ಆಳಕ್ಕೆ ಬಿದ್ದಿದ್ದಾಳೆ. ಅಲೆಕ್ಸಾ ಟೆರಾಜಾ (23) ಎಂಬಾಕೆ ಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. 110 ಮೂಳೆಗಳು ಮುರಿದಿದ್ದು, 3 ವರ್ಷಗಳ ಕಾಲ ನಡೆಯಲು ಆಗದು ಎಂದು ವೈದ್ಯರು ಹೇಳಿದ್ದಾರೆ. ಅಲೆಕ್ಸಾಳಿಗೆ 11 ಗಂಟೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos