ಬೆಂಗಳೂರು , ಆ. 27 : ಪಕ್ಷ ನನಗೆ ತಾಯಿ ಸಮಾನ. ನಾನು ಸ್ವಾಭಿಮಾನಿ. ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿರಲಿಲ್ಲ. ಇದೇ ಖಾತೆ ಬೇಕು ಎಂದು ಯಾರನ್ನೂ ಕೇಳಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಸ್ಪಷ್ಟಪಡಿಸಿ, ಪಕ್ಷ ನನಗೆ ಹಲವಾರು ಜವಾಬ್ದಾರಿಗಳನ್ನು ನೀಡಿದೆ. ಹಲವು ಹಂತಗಳಲ್ಲಿ ಹತ್ತಾರು ಹುದ್ದೆಗಳನ್ನು ನೀಡಿದೆ, ನಾನು ಇರುವುದು ಬಿಜೆಪಿಯಲ್ಲಿ ಸಾಯುವುದು ಕೂಡ ಬಿಜೆಪಿಯಲ್ಲೇ. ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಅವರು ತಿಳಿಸಿದ್ದಾರೆ. ಇಂದು ನಡೆಯುವ ನಳೀನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಎಲ್ಲ ಗೊಂದಲಗಳಿಗೂ ತೆರೆ ಎಳೆಯುತ್ತೇನೆ.