ರೈತ ಸಂಘದ ವತಿಯಿಂದ ಪ್ರತಿಭಟನೆ

ರೈತ ಸಂಘದ ವತಿಯಿಂದ ಪ್ರತಿಭಟನೆ

ದೇವನಹಳ್ಳಿ, ಆ. 27: ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ ನಲ್ಲಿರುವ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಇದೇ ತಿಂಗಳ ಮೊದಲ ವಾರದಿಂದ ಸುಮಾರು 2 ವಾರಗಳು ಸುರಿದ ಮಳೆಯಿಂದಾಗಿ ಮತ್ತು ಮಹಾರಾಷ್ಟ್ರದ ಕೊಯ್ನಾ ಜಲಾಶಯ ಒಳಗೊಂಡಂತೆ ರಾಜ್ಯದ ಹಲವಾರು ಜಲಾಶಯಗಳ ನಿರ್ವಹಣೆಯ ಹೊಣೆ ಹೊತ್ತ ಸಿಬ್ಬಂದಿಯವರ ಬೇಜವಾಬ್ದಾರಿ ನಿರ್ವಹಣೆಯಿಂದ ಏಕಾಏಕಿ ಹೊರಬಿಟ್ಟ ಅಪಾರ ಪ್ರಮಾಣದ ನೀರು ಸುಮಾರು 4500 ಹಳ್ಳಿಗಳು ಜಲಾಘಾತಕ್ಕೆ ಒಳಗಾದವು ಮತ್ತು 14,82000ರಷ್ಟು ಎಕರೆ ಪ್ರದೇಶ ಕೃಷಿ ಬೆಳೆಯನ್ನು ಈ ಮಹಾಪ್ರವಾಹ ಸ್ವಾಹ ಮಾಡಿದೆ. ಈ ಮಹಾ ಪ್ರವಾಹದ ಹೊಣೆಯನ್ನು ಮಹಾರಾಷ್ಟ್ರ ಸರಕಾರ ಮತ್ತು ಕರ್ನಾಟಕ ಸರಕಾರ ಹೊರಬೇಕಾಗಿರುವುದರಿಂದ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಮಹಾರಾಷ್ಟ್ರದ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಏಕಾಏಕೀ 16ಕ್ಷ ಕ್ಯೂಸೆಕ್ಸ್ ನೀರನ್ನು ಕೊಯ್ನಾ ಜಲಾಶಯದಿಂದ ಬಿಟ್ಟಿದ್ದರಿಂದ ಅಪಾರ ಬೆಳೆನಷ್ಟವಾಗಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಅಪಾರ ನಷ್ಟವನ್ನು ಭರಿಸುವ ಸಂಪೂರ್ಣ ಹೊಣೆಯನ್ನು ಮಹಾರಾಷ್ಟ್ರದ ಸರ್ಕಾರ ತೆತ್ತಬೇಕು. ಕರ್ನಾಟಕದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಒಳಗೊಂಡಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂತ್ರಸ್ತರಿಗೆ ಕರ್ನಾಟಕ ಸರಕಾರ ಸಂತ್ರಸ್ತ ಗ್ರಾಮಗಳ ಸ್ಥಳಾಂತರ ಮತ್ತು ಎಲ್ಲಾ ನಷ್ಟಗೊಂಡ ಬೆಳಗಳ ಪರಿಹಾರವನ್ನು ಕೊಟ್ಟು ರೈತ ಕಉಟುಂಭಗಳ ಹಳ್ಳಿಗಳ ಬದುಕನ್ನು ಪನಃಶ್ಚೇತನಗೊಳಿಸಬೇಕು. ಉತ್ತರ ಕನಾಟಕದ ರೈತ ಎಲ್ಲಾ ಕಬ್ಬಿನ ಬಾಕಿಯನ್ನು ಶೀಘ್ರದಲ್ಲಿ ಪಾವತಿಮಾಡಬೇಕು. ಸಂತ್ರಸ್ತ ರೈತರ ಎಲ್ಲಾ ಸಾಲಗಳನ್ನು ರದ್ದಾಗಿಸಬೇಕು. ಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ವಿತರಣೆ ಮಾಡಬೇಕು. ರಾಜ್ಯದಲ್ಲಿ ಬೆಳೆ ವಿಮೆ ಶೀಘ್ರದಲ್ಲಿ ಪಾವತಿಯಾಗಬೇಕು. ರಾಜ್ಯಾಧ್ಯಂತ ಶಾಶ್ವತ ನೆರೆ ಮತ್ತು ಬರವಿರೋಧಿ ಕ್ರಮಗಳನ್ನು ಕೈಗೊಳ್ಳಬೇಕು. ಜಲಾಶಯಗಳು ಮತ್ತು ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಬೇಕು. ನೆರೆ ಸಂತ್ರಸ್ತರ ಪರಿಹಾರ ಮೊತ್ತವನ್ನು ವಸ್ತುನಿಷ್ಠವಾಗಿ ಪರಿಗಣಿಸಿ ವಿತರಿಸಬೇಕು. ಜಲಾಶಯಗಳ ಬೇಜಬಾಬ್ದಾರಿ ನಿರ್ವಹಣೆಯನ್ನು ಮಾಡಿ ಅಪಾರ ದುಃಖ ದುಮ್ಮಾನಗಳಿಗೆ ಕಾರಣರಾದವರ ಮೇಲೆ ಕಠಿಣಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಹರೀಶ್ ಮಾತನಾಡಿ, ನದಿಮೂಲಗಳನ್ನು ಹೊಂದಿರುವ ಜಿಲ್ಲೆಯಲ್ಲಿ ನದಿ ಪಾತ್ರಗಳ ಜಾಗವನ್ನು ಒಂದು ಕಿಲೋ ಮೀಟರ್‌ನಿಂದ 500ಮೀಟರ್‌ಗೆ ಕಡಿತ ಮಾಡಿ, ನದಿ ಪಾತ್ರಗಳಲ್ಲಿ ರೆಸಾರ್ಟ್, ಐಶಾರಾಮಿ ಕಟ್ಟಡ, ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡಿತಗೊಳಿಸಿದೆ. ಗಣಗಾರಿಕೆಗೆ ಅನುಮತಿ ನೀಡಲು ಪರೋಕ್ಷವಾಗಿ ಕಾರಣವಾಗುತ್ತಿದೆ. 2011ರ ಭೂಸ್ವಾಧೀನ ಕಾಯಿದೆ ತಿದ್ದುಪಡಿ ಮಾಡಿರುವ ಸಮಿಶ್ರ ಸರ್ಕಾರ ಪಾಪದ ಕೂಸಾಗಿದೆ. ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗೆ ಈ ಹಿಂದಿನ ಕಾಯಿದೆಯಂತೆ ನಾಲ್ಕು ಪಟ್ಟು ಪರಿಹಾರ ನೀಡಲು ಅವಕಾಶವಿದ್ದು, ತಿದ್ದುಪಡಿ ಕಾಯಿದೆಯಿಂದಾಗಿ ಕೇವಲ 1ಪಟ್ಟು ಮಾತ್ರ ಪರಿಹಾರ ಸಿಗಲಿದೆ. ಇದು ರೈತರಿಗೆ ಮರಣಶಾಸನ ಆಗಲಿದೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಬಾರದು. ಈಗಾಗಲೇ ಸಂಘದ ವತಿಯಿಂದ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಹರೀಶ್, ಬೈರೇಗೌಡ, ಮುನಿಶಾಮಪ್ಪ, ಚಿಕ್ಕೆÃಗೌಡ, ನವೀನ್ ಹಾಗೂ ಜಿಲ್ಲೆಯ ನಾಲ್ಕು ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos