ರಾಮನಗರ, ಆ. 26 : ವಿಷಹಾರ ಸೇವನೆಯಿಂದ 25ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಹಾರೋಹಳ್ಳಿಯ ಸ್ಟೇವ್ ಕ್ರಾಫ್ಟ್ ಕಂಪೆನಿಯಲ್ಲಿ ನಡೆದಿದೆ. ಕಂಪೆನಿಯಲ್ಲಿ ಬೆಳಗಿನ ಉಪಹಾರ ಸೇವಿಸಿ ಅಸ್ವತ್ಥ ಕಾರ್ಮಿಕರನ್ನು, ಕನಕಪುರ ತಾಲೂಕಿನ ಹಾರೋಹಳ್ಳಿ ಸರಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಪಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ವದಂತಿ ಹಬ್ಬಿದ್ದು, ಉಪಹಾರ ಸೇವಿಸಿದ ಕಾರ್ಮಿಕರಲ್ಲಿ ಆತಂಕ ಶುರುವಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.