ಅಂಟಿಗುವಾ , ಆ.25 : ಜಿಂಕ್ಯಾ ರಹಾನೆ ( 53 ರನ್), ಕೊಹ್ಲಿ ( 51 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ಗೆ ಬೃಹತ್ ಮೊತ್ತದ ಪೆರಿಸಿದೆ. ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 222 ರನ್ಗಳಿಗೆ ಆಟ ಮುಗಿಸಿದ ಬಳಿಕ 75 ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಾಟದ ಮುಕ್ತಾಯಕ್ಕೆ 72 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದ್ದು, 260 ರನ್ ಮುನ್ನಡೆ ಪಡೆದಿದೆ.
ಕೆ.ಎಲ್ ರಾಹುಲ್ (38 ರನ್), ಮಯಾಂಕ್ ಅಗರ್ವಾಲ್ (16 ರನ್) ಜೋಡಿ ಮತ್ತೆ ಮೂರು ಅಂಕಿಗಳ ಜತೆಯಾಟವಾಡುವಲ್ಲಿ ವಿಫಲ. ಇವರಿಬ್ಬರು ರೋಸ್ಟನ್ ಚೇಸ್ ಕಡಿವಾಣ ಹಾಕಿದರು. ಕಳೆದ ಇನಿಂಗ್ಸ್ನಲ್ಲೂ ವಿಫಲರಾಗಿದ್ದ ಚೇತೇಶ್ವರ ಪೂಜಾರ ಈ ಇನಿಂಗ್ಸ್ನಲ್ಲೂ 25 ರನ್ಗಳಿಗೆ ತಮ್ಮ ಆಟ ಮುಗಿಸಿದರು. ಕೇಮರ್ ರೋಚ್ ಅವರ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು.ಈ ಮೂಲಕ ಬಾರತ 81 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.
ಇದಕ್ಕೆ ಮುನ್ನ ವೆಸ್ಟ್ ಇಂಡೀಸ್ 74.2 ಓವರ್ ಗಳಲ್ಲಿ 222 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ 75ರನ್ ಗಳ ಮುನ್ನಡೆ ಗಳಿಸಿತ್ತು.ಇಶಾಂತ್ ಶರ್ಮಾ (5), ಮೊಹಮ್ಮದ್ ಶಮಿ (2), ರವೀಂದ್ರ ಜಡೇಜಾ (2) ವಿಕೆಟ್ ಕಬಳಿಸಿದ್ದರು.