ಕೆಆರ್ ಪೇಟೆ, ಆ. 24 : ಬೂಕಹಳ್ಳಿಕೊಪ್ಪಲು ಗ್ರಾಮದ ಭಾಸ್ಕರ್ ಕೆ.ಗೌಡ ಎಂಬುವವರ ಜಮೀನಿನಲ್ಲಿ ಬೋನಿಟ್ಟು ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಬೂಕನಕೆರೆ ಹೋಬಳಿ ಬೂಕಹಳ್ಳಿ ಕೊಪ್ಪಲು ಗ್ರಾಮದ ಬಳಿ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳ ಬೋನಿನಲ್ಲಿ ಸೆರೆಯಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಚಿರತೆ ಹಿಡಿದು ಆತಂಕ ದೂರ ಮಾಡುವಂತೆ ಮನವಿ ಮಾಡಿದ್ದರು. ಅರಣ್ಯಾಧಿಕಾರಿ ಮಧುಸೂಧನ್ ಅವರು ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್, ಸಿಬ್ಬಂದಿಯವರಾದ ಮನೋಜ್, ಮೋಹನ್, ನಾಗೇಂದ್ರ ಇತರರು ಭಾಗವಹಿಸಿದ್ದರು.
ತಾಲ್ಲೂಕು ಅರಣ್ಯಾಧಿಕಾರಿ ಮಧುಸೂಧನ್, ಕಾಡಿನಲ್ಲಿ ವಾಸಿಸುವ ಚಿರತೆಗೆ ಅಗತ್ಯ ಆಹಾರ ನೀರು ಸಿಗದ ಹಿನ್ನೆಲೆಯಲ್ಲಿ ಜನವಸತಿಯತ್ತ ಆಹಾರ ಹುಡುಕಿ ಬರುತ್ತಿವೆ. ಪ್ರತಿಯೊಬ್ಬರೂ ಅರಣ್ಯ ಉಳಿಸಲು ಸಹಕಾರ ನೀಡಬೇಕು.