ಖತರ್ನಾಕ್ ಕಳ್ಳ ಪೊಲೀಸ್ ರ ವಶಕ್ಕೆ

ಖತರ್ನಾಕ್ ಕಳ್ಳ ಪೊಲೀಸ್ ರ ವಶಕ್ಕೆ

ತುಮಕೂರು, ಆ. 23 : ವಿವಿಧ ಕಡೆ ಮೋಟಾರ್ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿ. ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ದ್ದು, 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್ಬೈಕ್ಗಳನ್ನು ಕಳ್ಳತನ ಹಲವು ಪ್ರಕರಣಗಳು ಪತ್ತೆಯಾಗಿವೆ. ಆ.21 ರಂದು ಕ್ಯಾತಸಂದ್ರ ವ್ಯಾಪ್ತಿಯ ಹಿರೇಗಹಳ್ಳಿ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿರುವ ಸಿಂಗೋನಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೈಕನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ಗಸ್ತಿನಲ್ಲಿ ಕ್ಯಾತಸಂದ್ರ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos