ಬ್ರಿಟನ್, ಆ. 22 : ಕೆಲ್ಲಿ ನಿದ್ದೆ ಗಣ್ಣಿನಲ್ಲಿ ತನ್ನ ಸ್ನೇಹಿತನ ಕೋಣೆಗೆ ಬಂದು ಆತನ ಪ್ರೇಯಸಿಯ ಜೊತೆ ಮಲಗಿಕೊಂಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆತ ಅರಿವಿಲ್ಲದೇ ಈ ಕೃತ್ಯ ಎಸಗಿದ್ದಾನೆ ಎಂದು ತೀರ್ಪು ನೀಡಿದೆ.
ನಿದ್ರಾಹೀನತೆಯಿರುವ ರೋಗಿಗಳಿಗೆ ಅನೇಕ ದಿನಗಳಲ್ಲಿ ನಿದ್ದೆಯೇ ಬರುವುದಿಲ್ಲ. ರಾತ್ರಿಯಿಡೀ ನಿದ್ರೆಯಿಲ್ಲದೆ ಬಳಲುತ್ತಿರುತ್ತಾರೆ. ಕೆಲವರಿಗೆ ನಿದ್ದೆಯಲ್ಲೂ ಓಡಾಡುವ ಅಭ್ಯಾಸ ಇರುತ್ತದೆ. ಬ್ರಿಟನ್ನಲ್ಲಿ ನಿದ್ರೆಯಲ್ಲಿ ನಡೆದಾಡುವ ಕಾಯಿಲೆ ಇರುವ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪ್ರೇಯಸಿಗೆ ಲೈಂಗಿಕ ಕಿರುಕುಳ ನೀಡಿದ್ದ. ಆದರೂ, ಆತ ಕೇಸಿನಿಂದ ಬಚಾವಾಗಿದ್ದಾನೆ.