ಕೇರಳಕ್ಕೆ ಕೇಂದ್ರದ ನೆರವು ಇಲ್ಲ

ಕೇರಳಕ್ಕೆ ಕೇಂದ್ರದ ನೆರವು ಇಲ್ಲ

ನವದೆಹಲಿ, ಆ. 21 : ಒಡಿಶಾ, ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಳೆದ ಹಣಕಾಸು ವರ್ಷ ನೈಸರ್ಗಿಕ ವಿಕೋಪಗಳಿಂದ ಆದ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ 4432 ಕೋಟಿ ರೂ. ನೆರವು ಮಂಜೂರು ಮಾಡಿದೆ. ಭೀಕರ ಪ್ರವಾಹದಿಂದ ತತ್ತರಿಸಿದ್ದ ಕೇರಳಕ್ಕೆ ಚಿಕ್ಕಾಸು ನೆರವು ಕೂಡಾ ದಕ್ಕಿಲ್ಲ. ವ್ಯಾಪಕ ಮಳೆ ಹಾಗೂ ಪ್ರವಾಹದಿಂದ 11 ರಾಜ್ಯಗಳಲ್ಲಿ ಸಂಭವಿಸಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ತಕ್ಷಣವೇ ಅಂತರ ಸಚಿವಾಲಯ ಕೇಂದ್ರ ತಂಡವನ್ನು ರಚಿಸಿ ನಿಯೋಜಿಸಲು ಕೂಡಾ ನಿರ್ಧರಿಸಲಾಗಿದೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ, ಫನಿ ಚಂಡಮಾರುತದಿಂದ ತತ್ತರಿಸಿದ್ದ ಒಡಿಶಾಗೆ 3338 ಕೋಟಿ ರೂ., ಬರ ಪರಿಸ್ಥಿತಿ ಎದುರಿಸಿದ ಕರ್ನಾಟಕಕ್ಕೆ 1029 ಕೋಟಿ ಹಾಗೂ ಹಿಮಪಾತ ಹಾಗೂ ಆಲಿಕಲ್ಲು ಮಳೆಯಿಂದ ಆದ ಹಾನಿಗಾಗಿ ಹಿಮಾಚಲ ಪ್ರದೇಶಕ್ಕೆ 64 ಕೋಟಿ ರೂ. ಹೆಚ್ಚುವರಿ ಕೇಂದ್ರೀಯ ನೆರವು ನೀಡಲು ನಿರ್ಧರಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈ ಮೊತ್ತ ನೀಡಲಾಗುತ್ತದೆ.
“ಪ್ರವಾಹಪೀಡಿತ ರಾಜ್ಯಗಳಿಗೆ ಎನ್ಡಿಆರ್ಎಫ್ನಿಂದ 4432 ಕೋಟಿ ರೂ. ನೆರವು ನೀಡಲು ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ತೀವ್ರ ನೆರೆಹಾನಿಯಿಂದ ಕಂಗೆಟ್ಟ ಕೇರಳಕ್ಕೆ ಸಿಕ್ಕಿದ್ದು ಶೂನ್ಯ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos