ಬೆಂಗಳೂರು, ಆ.19 : ಸುದೀಪ್ ಹಾಗೂ ಪುನೀತ್ ಸ್ನೇಹ ಚಿಕ್ಕವಯಸ್ಸಿನಿಂದಲೂ ಬಂದಿದೆ.ಕನ್ನಡ ಚಿತ್ರರಂಗದ ಸ್ಟಾರ್ ಗಳಲ್ಲಿ ಇಬ್ಬರಾದ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ಒಳ್ಳೆಯ ಗೆಳೆಯರಾಗಿದ್ದಾರೆ. ಇವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡದಿದ್ದರೂ ಸಹ ಇವರ ಫ್ರೆಂಡ್ ಶಿಪ್ ಬಹಳ ಮಹತ್ವದ್ದಾಗಿದೆ. ಒಬ್ಬರಿಗೊಬ್ಬರ ನಡುವೆ ಉತ್ತಮ ಬಾಂಧವ್ಯವಿದೆ, ಒಬ್ಬರ ಚಿತ್ರವನ್ನು ಮತ್ತೊಬ್ಬರು ಬೆನ್ನು ತಟ್ಟುತ್ತಾರೆ.
ಸ್ಯಾಂಡಲ್ ವುಡ್ ನಟರ ಮಧ್ಯೆ ಎಲ್ಲವೂ ಸರಿಯಿಲ್ಲ. ಅಭಿಮಾನಿಗಳು ಕೂಡ ದಿನ ಬೆಳಗಾದರೇ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಾವು ಗ್ರೇಟ್, ನಾವೇ ಗ್ರೇಟ್ ಅಂತ ಸ್ಟೇಟಸ್ ಮೇಲೆ ಸ್ಟೇಟಸ್ ಗಳು, ಟ್ರೋಲ್ ಗಳನ್ನ ಪೋಸ್ಟ್ ಮಾಡಿ ದೊಡ್ಡ ಜಗಳವನ್ನೇ ಮಾಡ್ತಾರೆ.