ಬಾತುಕೋಳಿಗಳನ್ನು ನುಂಗಿದ ಬುಲ್ ಡಾಗ್

ಬಾತುಕೋಳಿಗಳನ್ನು ನುಂಗಿದ ಬುಲ್ ಡಾಗ್

ಥಾಯ್ಲೆಂಡ್, ಆ.18 : ಹಸಿವಿನಿಂದ ಬುಲ್ ಡಾಗ್ ವೊಂದು 38 ರಬ್ಬರ್ ಬಾತುಕೋಳಿಗಳನ್ನು ನುಂಗಿದ ಘಟನೆ ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆದಿದೆ. ಮಾಲೀಕ ಸ್ವಿಮಿಂಗ್ ಪೂಲ್ ತಂದಿದ್ದ 50 ರಬ್ಬರ್ ಬಾತುಕೋಳಿಗಳಲ್ಲಿ 38 ಬಾತುಕೋಳಿಗಳು ಕಾಣೆಯಾಗುದ್ದವು. ನಾಯಿ 5 ರಬ್ಬರ್ ಬಾತುಕೋಳಿಗಳನ್ನು ವಾಂತಿ ಮಾಡಿ ಹೊರಹಾಕುತ್ತಿರುವುದನ್ನು ಕಂಡ ಮಾಲೀಕ ಕಳೆದು ಹೋದ ಉಳಿದ ಆಟಿಕೆಗಳೂ ಹೊಟ್ಟೆಯಲ್ಲಿ ಇರಬಹುದು ಎಂದು ಭಾವಿಸಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು.ಎಕ್ಸ್ ರೇ ಮೂಲಕ, ಹೊಟ್ಟೆಯೊಳಗೆ ಆಟಿಕೆಗಳು ಇರುವುದನ್ನು ನೋಡಿದ್ದ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ರಬ್ಬರ್ ಬಾತುಕೋಳಿಗಳನ್ನು ಹೊರಗೆ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ನಾಯಿ ಇದೀಗ ಚೇತರಿಸಿಕೊಳ್ಳುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos