ದೀಪಾವಳಿಗೆ ಚಿನ್ನದ ಬೆಲೆ ಏರಿಕೆ

ದೀಪಾವಳಿಗೆ ಚಿನ್ನದ ಬೆಲೆ ಏರಿಕೆ

ನವದೆಹಲಿ,ಆ.18 : ದೀಪಾವಳಿ ಹಿನ್ನಲೆ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂ. ಏರಿಕೆಯಾಗುವ ಸಾಧ್ಯತೆಯಿದೆ.ಆ. 3ನೇ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 38 ಸಾವಿರದ ಗಡಿ ದಾಟಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ 35,780 ರೂ. ಇತ್ತು. ಈ ಬೆಲೆ ಅಕ್ಟೋಬರ್ ದೀಪಾವಳಿಯ ಸಂದರ್ಭದಲ್ಲಿ 40 ಸಾವಿರ ರೂ.ಗೆ ಏರಿಕೆಯಾಗಬಹುದು ಕ್ಷೇತ್ರದಲ್ಲಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜುಲೈ ತಿಂಗಳಿನಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 34,300 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 32,520 ರೂ. ಇತ್ತು. ಆಗಸ್ಟ್ ಮೊದಲ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 35,590 ರೂ. ಇದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 33,830 ರೂ.ಗೆ ಏರಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos