ಬೆಂಗಳೂರು, 16. ಆ : ಸಿಲಿಕಾನ್ ಸಿಟಿಯಲ್ಲಿ ಯುವಕರು ತಮ್ಮ ತಮ್ಮ ಹುಚ್ಚಾಟ ಮಾತ್ರ ಬಿಡುತ್ತಿಲ್ಲ. ವೀಲ್ಹಿಂಗ್ ಮಾಡಬೇಡಿ ಎಂದು ಅಲರ್ಟ್ ನೀಡಿದರೂ ಇದನ್ನು ಲೆಕ್ಕಿಸದೆ ತಮ್ಮ ಹುಚ್ಚಾಟವನ್ನು ಮುಂದುವರೆಸುತ್ತಿದ್ದಾರೆ. ಬೆಂಗಳೂರಿನ ದೇವನಹಳ್ಳಿ ವ್ಯಾಪ್ತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ ಬಂಧಿತ ಯುವಕ. ವೀಲ್ಹಿಂಗ್ ಮಾಡಿ, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ ಹಿನ್ನಲೆ ವಿಡಿಯೋ ಆಧರಿಸಿ ನಂಬರ್ ಟ್ರೇಸ್ ಮಾಡಿದ್ದ ಪೊಲೀಸರು ಸಾಗರ್ ಮನೆಗೆ ಬಂದಿದ್ದಾರೆ. ಮನೆಯಿಂದಲೇ ಬಂಧಿಸಿ, ವೀಲ್ಹಿಂಗ್ಗೆ ಬಳಸಿದ್ದ ಬೈಕ್ ಕೂಡ ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಸತೀಶ್ ಕುಮಾರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.