ಬೆಳಗಾವಿ, ಆ. 14 : ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಪ್ರವಾಹ ಸಿಲುಕಿರು ಜನರಿಗೆ ಸುರಕ್ಷಿತ ತಾಣಕ್ಕೆ ಕಳಿಸಬೇಕಿದ ಅಧಿಕಾರಿಗಳೇ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಆರೋಪವೊಂದು ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪೊಲೀಸರ ವಿರುದ್ಧ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ನೂರಕ್ಕೂ ಅಧಿಕ ನಿರಾಶ್ರಿತರಿದ್ದು, ಈಗ ಅಗಸ್ಟ್ 15 ರಂದು ಧ್ವಜಾರೋಹಣ ಮಾಡಬೇಕಿದೆ ಇಂದು ಶಾಲೆ ಬಿಡುವಂತೆ ಅಧಿಕಾರಿಗಳು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಸರ್ಕಾರದಿಂದ 3,800 ಚೆಕ್ ಕೊಟ್ಟು ಈಗ ಜಾಗ ಖಾಲಿ ಮಾಡಿಸುತ್ತಿರುವ ಪಿಡಿಒ ಮತ್ತು ಪೊಲೀಸರ ವಿರುದ್ಧ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.