ಸುಕ್ಮಾ ಆ.14 : ವೆಟ್ಟಿರಾಮಾ ರಕ್ಷಾ ಬಂಧನ ಹಿನ್ನಲೆ ಸಹೋದರಿಗೆ ಪೊಲೀಸ್ ಪೇದೆ ಸೇರಿಕೊಳ್ಳುವಂತೆ ಮನವಿ ಮಾಡಿದ್ದಾರೆ. ‘’ನನ್ನ ತಂಗಿ ನನ್ನ ಮಾತು ಮಿರಲಾರಳು. ನನ್ನಂತೆ ಪೊಲೀಸ್ ಪೇದೆ ಸೇರಿಕೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ. ಸಹೋದರಿಗೆ ಅನೇಕ ಬಾರಿ ಪತ್ರ ಮುಖೇನ ನಕ್ಸಲ್ ಸಹವಾಸ ಬಿಟ್ಟು ಪೊಲೀಸ್ ಸೇವೆಗೆ ಬರುವಂತೆ ಕರೆದಿದ್ದೇನೆ. ಸಮಾಜದ್ರೋಹಿ ಕೆಲಸ ಬಿಟ್ಟು ಸಮಾಜಸೇವಾ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಮನವಿ ಮಾಡಿದ್ದೇನೆ.
ಸಹೋದರಿಯೂ ಸೇರಿರುವ ನಕ್ಸಲ್ ಗುಂಪಿನೆದುರು ಎನ್ಕೌಂಟರ್ಗೆಂದು ಸಹೋದರ ಗನ್ ಹಿಡಿದು ಹೋರಾಡುವ ಸನ್ನಿವೇಶ ಹೇಗಿರಬಹುದು ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ! ಇದು ಸಿನಿಮಾ ಕತೆಯಲ್ಲ. ಛತ್ತೀಸ್ಗಢದ ಸುಕ್ಮಾದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
2018ರಲ್ಲಿ ಪೊಲೀಸ್ ಸೇವೆಗೆ ಸೇರಿದ ವೆಟ್ಟಿರಾಮಾ ಜುಲೈ 29ರಂದು ನಕ್ಸಲ್ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಸಹೋದರಿ ವಿರುದ್ಧ ಮುಖಾಮುಖಿಯಾಗಿ ನಿಂತು ರಕ್ತ ಸಂಬಂಧಿ ಎಂಬುದನ್ನೂ ಲೆಕ್ಕಿಸದೇ ಗುಂಡಿನ ಚಕಮಕಿ ನಡೆಸಿದ್ದಾರೆ. ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಅದೃಷ್ಟವಶಾತ್ ಅಂದು ವೆಟ್ಟಿಕನ್ನಿ ಕೂದಲೆಳೆಯ ಅಂತರದಲ್ಲಿ ಗುಂಡೇಟಿನಿಂದ ಪಾರಾಗಿದ್ದಾಳೆ ಎಂದಿದ್ದಾರೆ.