ಮೈಸೂರು, ಆ. 12: ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಕಪಿಲಾ ನದಿಗೆ ಹಾರಿದ ವ್ಯಕ್ತಿ ಕಾರಣೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ವೆಂಕಟೇಶ್ (53) ಎಂಬಾತನ್ನೆ ನಾಪತ್ತೆಯಾದ ವ್ಯಕ್ತಿ. ಈತನು ಸ್ನೇಹಿತರ ಜೊತೆ ಸವಾಲು ಹಾಕಿ ಶನಿವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ನಂಜನಗೂಡು ಪಟ್ಟಣದ ಹೊಸ ರೈಲ್ವೆ ಸೇತುವೆಯಿಂದ ಕಪಿಲಾ ನದಿಗೆ ಧುಮುಕಿದ ಪೂಜಾರಿ ವೆಂಕಟೇಶ್ ಮೂರು ದಿನ ಕಳೆದರು ಇನ್ನೂ ಪತ್ತೆಯಾಗಿಲ್ಲ. ಈ ಘಟನೆ ವೆಂಕಟೇಶ್ ಮೈಸೂರಿನ ನಂಜನಗೂಡು ಪಟ್ಟಣದ ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ ನದಿಯಲ್ಲಿ ಈಜುವ ದುಃಸ್ಸಾಹಸಕ್ಕೆ ಹೋಗಿ ನಾಪತ್ತೆ ಆಗಿದ್ದಾರೆ. ವೆಂಕಟೇಶ್ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.