ಧಾರವಾಡ, ಆ.8 : ಬೆಡ್ತಿಹಳ್ಳದ ರಭಸಕ್ಕೆ ಸಿಲುಕಿ ಟಾಟಾ ಏಸ್ ವಾಹನದಲ್ಲಿನ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಮುರಕಟ್ಟಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.ಕಳೆದ ರಾತ್ರಿ ಧಾರವಾಡದಿಂದ ದಾಂಡೇಲಿಗೆ ಈ ವಾಹನ ಸಾಗುತ್ತಿತ್ತು.ಈ ಸಮಯದಲ್ಲಿ ರಸ್ತೆಯಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು, ಇದರ ರಭಸಕ್ಕೆ ವಾಹನ ಕೊಚ್ಚಿ ಹೋಗಿದೆ. ಇಂದು ಬೆಳಗ್ಗೆ ಗ್ರಾಮಸ್ಥರು ಗಮನಿಸಿದಾಗ ಚಾಲಕ ವಾಹನದಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.